ಟೊಮೆಟೋ ಆಯ್ತು.. ಇನ್ನೀಗ ಈರುಳ್ಳಿಗೂ ಕಣ್ಣೀರು ಹಾಕಬೇಕಾ?
ಆದರೆ ಇದೀಗ ಆ ಸ್ಥಾನವನ್ನು ಈರುಳ್ಳಿ ಪಡೆಯುವ ಎಲ್ಲಾ ಲಕ್ಷಣಗಳಿವೆಯಂತೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 80 ರೂ. ದಾಟಲಿದೆ ಎಂದು ಮಾರುಕಟ್ಟೆ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಮಳೆಯಿಲ್ಲದೇ ಬೆಳೆ ಕಡಿಮೆಯಾಗಿರುವುದರಿಂದ ಈರುಳ್ಳಿ ಕಣ್ಣೀರು ತರಿಸಬಹುದು ಎನ್ನಲಾಗಿದೆ. ಹಾಗಾಗಿ ಈಗಲೇ ಖರೀದಿಸಿಟ್ಟುಕೊಳ್ಳುವುದು ಒಳ್ಳೆಯದು!