ರೋಮಿಂಗ್ ಶುಲ್ಕ ರದ್ದು ಮಾಡಿದ ಭಾರ್ತಿ ಏರ್‌ಟೆಲ್

ಮಂಗಳವಾರ, 28 ಫೆಬ್ರವರಿ 2017 (08:14 IST)
ರಿಲಯನ್ಸ್ ಜಿಯೋ ಸ್ಪರ್ಧೆಗೆ ಹೈರಾಣಾಗಿರುವ ಭಾರ್ತಿ ಏರ್‌ಟೆಲ್ ಇದೀಗ ರೋಮಿಂಗ್ ಶುಲ್ಕವನ್ನು ರದ್ದುಗೊಳಿಸಿದ್ದೆ. ಏರ್ಪಿಲ್ 1ರಿಂದ ಅನ್ವಯವಾಗುವಂತೆ ರೋಮಿಂಗ್ ದರಗಳನ್ನು ರದ್ದುಗೊಳಿಸಿರುವುದಾಗಿ ಕಂಪೆನಿ ತಿಳಿಸಿದೆ. 
 
ಒಳಬರುವ, ಹೊರ ಹೋಗುವ ಕರೆ, ಎಸ್ಎಂಎಸ್ ಮತ್ತು ಡಾಟಾ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಇದರ ಜತೆಗೆ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಬಳಸುವ ತನ್ನ ಗ್ರಾಹಕರಿಗೂ ಏರ್‌ಟೆಲ್ ಆಕರ್ಷಕ ಕೊಡುಗೆ ಪ್ರಕಟಿಸಿದೆ. ಅಂತಾರಾಷ್ಟ್ರೀಯ ಕರೆ ದರಗಳಲ್ಲಿ ಶೇ.90ರಷ್ಟು ಕಡಿತಗೊಳಿಸಿದೆ. ನಿಮಿಷಕ್ಕೆ ರೂ.3 ನಿಗದಿಗೊಳಿಸಿದೆ.
 
ಇನ್ನು ಮುಂದೆ ಗ್ರಾಹಕರಿಗೆ ಭಾರಿ ಮೊತ್ತದ ಬಿಲ್ ಬರುವುದಿಲ್ಲ. ರೋಮಿಂಗ್ ಶುಲ್ಕದ ಭಯವಿರಲ್ಲ. ಕರೆ, ಸಂದೇಶ ಮತ್ತು ಡಾಟಾ ಸೌಲಭ್ಯ ಬಳಸಬಹುದೆಂದು ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ವಿಠ್ಠಲ್ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ