ಐಆರ್‌ಸಿಟಿಸಿಯಿಂದ 15 ಕೋಟಿ ವೆಚ್ಚದಲ್ಲಿ ಸೈಬರ್ ಭದ್ರತಾ ಸೆಲ್

ಶನಿವಾರ, 7 ಮೇ 2016 (16:30 IST)
ದತ್ತಾಂಶ ಕಳವಿನ ಆರೋಪಗಳನ್ನು ಐಆರ್‌ಸಿಟಿಸಿ ನಿರಾಕರಿಸಿ ಸೋರಿಕೆಯಾದ ದತ್ತಾಂಶವು ತನ್ನ ದತ್ತಾಂಶ ಮೂಲಕ್ಕೆ ಹೋಲಿಕೆಯಾಗುವುದಿಲ್ಲ ಎಂದು ತಿಳಿಸಿದೆ. ಆದರೂ ಕೂಡ ದತ್ತಾಂಶ ಸಂರಕ್ಷಣೆಗಾಗಿ ಸೈಬರ್ ಸೆಕ್ಯೂರಿಟಿ ಸೆಲ್ ನಿರ್ಮಿಸುವ ಪ್ರಯತ್ನದಲ್ಲಿದೆ. ಭವಿಷ್ಯದಲ್ಲಿ ಇಂತಹ ಅಪಾಯಗಳನ್ನು ಎದುರಿಸಲು  15 ಕೋಟಿ ಆರಂಭಿಕ ಬಂಡವಾಳದೊಂದಿಗೆ ಸೈಬರ್ ಭದ್ರತಾ ಸೆಲ್ ಸ್ಥಾಪಿಸಲಾಗುವುದಾಗಿ ಐಆರ್‌ಸಿಟಿಸಿ ತಿಳಿಸಿದೆ. 
 
ಐಆರ್‌ಸಿಟಿಸಿ ಇ- ಟಿಕೆಟಿಂಗ್ ವ್ಯವಸ್ಥೆಯಿಂದ ದತ್ತಾಂಶಮೂಲದ ಸೋರಿಕೆಯನ್ನು ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಅಧಿಕಾರಿಗಳು ಅಲ್ಲಗಳೆದಿದ್ದು, ಪ್ರತಿಯೊಂದೂ ಸುರಕ್ಷಿತ ಮತ್ತು ಭದ್ರವಾಗಿದೆ ಎಂದು ತಿಳಿಸಿದೆ.
 
ಮ್ಮ ಆರಂಭಿಕ ವರದಿಗಳಲ್ಲಿ ಯಾವುದೇ ಹ್ಯಾಕಿಂಗ್ ಅಥವಾ ಯಾವುದೇ ಸೋರಿಕೆಯು ಐಆರ್‌ಸಿಟಿಸಿ ಟಿಕೆಟಿಂಗ್ ವೆಬ್‌ಸೈಟ್‌ನಲ್ಲಿ ಕಂಡುಬಂದಿಲ್ಲ. ಪ್ರತಿಯೊಂದು ಸುರಕ್ಷಿತವಾಗಿದ್ದು, ಸುಗಮವಾಗಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿ ಸೂದ್ ತಿಳಿಸಿದರು. 

ವೆಬ್ದುನಿಯಾವನ್ನು ಓದಿ