ಯಾವುದೇ ಬ್ಯಾಂಕ್‌ ಎಟಿಎಂನಿಂದ ಮೊಬೈಲ್ ನೋಂದಣಿಗೆ ಅವಕಾಶ: ಆರ್‌ಬಿಐ

ಬುಧವಾರ, 31 ಆಗಸ್ಟ್ 2016 (18:41 IST)
ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆ ನಿರ್ಣಾಯಕ ಭಾಗವಾಗಿ ಪರಿಣಮಿಸಿದ್ದು, ಗ್ರಾಹಕರು ಬ್ಯಾಂಕಿನ ಎಟಿಎಂ ಜೊತೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಡ್ಡಾಯಗೊಳಿಸಿದೆ. 
 
ಬ್ಯಾಂಕ್‌ಗಳು, ಗ್ರಾಹಕರಿಗೆ ಮೊಬೈಲ್ ಸಂಖ್ಯೆ ನೋಂದಣಿಗಾಗಿ ತವರು ಶಾಖೆಗೆ ಭೇಟಿ ನೀಡುವಂತೆ ಸಲಹೆ ನೀಡದೆ ಎಲ್ಲಾ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಮೊಬೈಲ್ ಸಂಖ್ಯೆ ನೋಂದಣಿಗಾಗಿ ಅವಕಾಶ ನೀಡುವುದಲ್ಲದೇ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಕೂಡಾ ಮೊಬೈಲ್ ಸಂಖ್ಯೆ ನೋಂದಣಿ ಮಾಡಲು ಅವಕಾಶವಿರಬೇಕು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಸ್ಪಷ್ಟ ನಿರ್ದೆಶನ ನೀಡಿದೆ.
 
ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಗೆ ಮೊಬೈಲ್ ಸಂಖ್ಯೆಯನ್ನು ನೋಂದಾಯಿಯಿಸುವುದು ಅಗತ್ಯವಾಗಿದೆ. ಯಾಕೆಂದರೆ, ಹಣದ ವಹಿವಾಟಿ ಕುರಿತಂತೆ ಬ್ಯಾಂಕ್‌ಗಳು ಪ್ರತಿ ಹಣದ ವರ್ಗಾವಣೆಯ ವಿವರವನ್ನು ಗ್ರಾಹಕರಿಗೆ ಎಸ್‌ಎಂಎಸ್ ಸಂದೇಶ ರವಾನಿಸುವುದರಿಂದ ಹಣದ ವಂಚನೆಯನ್ನು ತಡೆಯಬಹುದಾಗಿದೆ. ಬ್ಯಾಂಕ್‌ಗಳು ಒನ್ ಟೈಮ್ ಪಾಸ್‌ವರ್ಡ್‌‌ನ್ನು ಗ್ರಾಹಕರಿಗೆ ಕಳುಹಿಸಲು ಮೊಬೈಲ್ ಸಂಖ್ಯೆ ಅಗತ್ಯವಾಗಿರುತ್ತದೆ.
 
ಕ್ರೆಡಿಟ್ ಕಾರ್ಡ್ ಕಂಪೆನಿಗಳ ಪ್ರಕಾರ, ಬ್ಯಾಂಕ್ ಗ್ರಾಹಕರಿಗೆ ಎಸ್‌ಎಮ್‌ಎಸ್ ಮೂಲಕ ಓಟಿಪಿ ರವಾನಿಸುವ ಮೂಲಕ ವಂಚನೆ ಪ್ರಕರಣಗಳು ಕಡಿಮೆಯಾಗುತ್ತಿವೆ. ಬ್ಯಾಂಕ್‌ಗಳು ಸಹ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಮಿಸ್ ಕಾಲ್ಡ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ