ನವದೆಹಲಿ : ದಸರಾ ದೀಪಾವಳಿ ಹಬ್ಬಗಳಿಗೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿರುವ ಇ-ಕಾಮರ್ಸ್ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳಿಗೆ ಇದೀಗ ಸಂಕಷ್ಟ ಒಂದು ಎದುರಾಗಿದೆ.
ಹೌದು. ಹಬ್ಬದ ಮಾರಾಟದ ಸಂದರ್ಭದಲ್ಲಿ ಇ-ಕಾಮರ್ಸ್ ಕಂಪೆನಿಗಳು ವಿದೇಶಿ ನೇರ ಹೂಡಿಕೆ ನೀತಿಯನ್ನು ಉಲ್ಲಂಘಿಸುವುದಲ್ಲದೇ, ಸರಿಯಾದ ವ್ಯಾಪಾರ ನೀತಿಯನ್ನು ಅನುಸರಿಸುತ್ತಿಲ್ಲ ಎಂದು ವ್ಯಾಪಾರಿಗಳ ಸಂಘ ಸಿಎಐಟಿಗೆ ದೂರು ನೀಡಿವೆ.
ಆದಕಾರಣ ಆನ್ ಲೈನ್ ವ್ಯಾಪಾರ ಕಂಪೆನಿಗಳು ಸರಕುಗಳ ದರ ಪಟ್ಟಿ, ಇವುಗಳಿಗೆ ಕಂಪೆನಿ ನೀಡಿದ ಬೆಲೆ, ವಿತರಕರು, ಚಲ್ಲರೆ ವ್ಯಾಪಾರಿಗಳ ದರ ಪಟ್ಟಿ, ಬಂಡವಾಳ, ವ್ಯವಹಾರ ಮಾದರಿ ಮತ್ತು ದಾಸ್ತಾನು ನಿರ್ವಹಣೆ ಸೇರಿದಂತೆ ಅನೇಕ ವಿಚಾರದ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಸಿಎಐಟಿ ತಿಳಿಸಿದೆ.