ಈ ತಿಂಗಳು 20-22ರವರೆಗೆ ನಿರ್ವಹಿಸಲಿರುವ ಗ್ರೇಟ್ ಇಂಡಿಯನ್ ಸೇಲ್‍ಗಾಗಿ 7,500 ಮಂದಿ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲು ಅಮೆಜಾನ್ ಸಂಸ್ಥೆ ನಿರ್ಧರಿಸಿದೆ. ಉತ್ಪನ್ನಗಳನ್ನು ಸಮಯಕ್ಕೆ ಸರಿಯಾಗಿ, ಸೂಕ್ತ ರೀತಿಯಲ್ಲಿ ತಲುಪಿಸಲು ಲಾಜಿಸ್ಟಿಕ್ ವಿಭಾಗದಲ್ಲಿ ಅತ್ಯಧಿಕ ನೇಮಕಾತಿಗಳನ್ನು ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.
ದೇಶದ 10 ರಾಜ್ಯಗಳಲ್ಲಿ 27 ಗೋಧಾಮುಗಳು, 100 ಸರಬರಾಜು ಕೇಂದ್ರಗಳಲ್ಲಿ ಈ ಉದ್ಯೋಗವಕಾಶಗಳು ಇವೆಯೆಂದು ಅಮೆಜಾನ್ ಉಪಾಧ್ಯಕ್ಷ (ಭಾರತ) ಅಖಿಲ್ ಸಕ್ಸೇನಾ ತಿಳಿಸಿದ್ದಾರೆ. ಸೀಸನ್ ಪ್ರಕಾರ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಕ್ಷೇತ್ರದಲ್ಲಿ ದೀರ್ಘಕಾಲಿಕ ಉದ್ಯೋಗ ಪಡೆಯುವವರಿಗೆ ಇದರಿಂದ ಉಪಯೋಗವಾಗಲಿದೆ ಎಂದು ಕಂಪೆನಿ ಹೇಳಿದೆ.