ಅಮೆರಿಕಾ ಪ್ರಕಾರ ಈ ಹೊಸ ಐಫೋನ್ ಬೆಲೆ 1000 ಡಾಲರ್ ಇರಬಹುದೆಂದು ಊಹಿಸಲಾಗಿದೆ. ಆಪೆಲ್ ಬಿಡುಗಡೆ ಮಾಡಲಿರುವ ಅತ್ಯಂತ ದುಬಾರಿ ಐಫೋನ್ ಇದೇ ಎಂಬುದು ವಿಶೇಷ. ಇದರ ಜತೆಗೆ ಐಫೋನ್ 7, ಐಫೋನ್ 7 ಪ್ಲಸ್ ಮಾಡೆಲ್‌ಗಳನ್ನೂ ನವೀಕರಿಸಿ ಐಫೋನ್ 7ಎಸ್, ಐಫೋನ್ 7ಎಸ್ ಪ್ಲಸ್ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ.
ಐಫೋನ್ 7 ಪ್ಲಸ್‌ಗೆ ಹೋಲಿಸಿದರೆ ಐಫೋನ್ 8 ಚಿಕ್ಕದಾಗಿರುತ್ತದೆ. ಐಫೋನ್ 8 ಬೆರಳಚ್ಚು ಮುದ್ರೆ, ವೈರ್‌ಲೆಸ್ ಚಾರ್ಚಿಂಗ್ ಸೌಲಭ್ಯಗಳೊಂದಿಗೆ ಬರುತ್ತಿರುವುದು ವಿಶೇಷ. ಹೊಸ ಆಕ್ಸೆಸರೀಸ್ ಸಹ ಈ ಬಾರಿ ಆಪೆಲ್ ನೀಡಲಿದೆ. 8 ಪಿನ್‌ಗಳ ಅಲ್ಟ್ರಾ ಆಕ್ಸೆಸರಿ ಕನೆಕ್ಟರ್ (ಯುಎಸಿ) ಈಗಿನ ಯುಎಸ್‌ಬಿ-ಸಿಗಿಂತಲೂ ತೆಳುವಾಗಿರುತ್ತದೆ. 5.8 ಇಂಚಿನ ಪರದೆಯಲ್ಲಿ 5.15ರಷ್ಟನು ಮಾತ್ರ ಬಳಸಿಕೊಳ್ಳಬಹುದು ಎನ್ನಲಾಗಿದೆ.