Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Krishnaveni K

ಶನಿವಾರ, 4 ಅಕ್ಟೋಬರ್ 2025 (13:33 IST)
ಬೆಂಗಳೂರು: ದಸರಾ ಬಳಿಕ ಅಡಿಕೆ ಬೆಲೆ ಹೆಚ್ಚಾಗಬಹುದೇನೋ ಎಂಬ ನಿರೀಕ್ಷೆಗಳೂ ಸುಳ್ಳಾಗಿದೆ. ಅಡಿಕೆ ಬೆಲೆ ಈಗಲೂ ಸ್ಥಿರವಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ದಸರಾ ಮುಗಿದ ಬಳಿಕವೂ ಹೊಸ ಅಡಿಕೆ ವರ್ಗ ಪರಿಷ್ಕರಣೆಯಾದರೂ ಬೆಲೆ ಮಾತ್ರ ಸ್ಥಿರವಾಗಿದೆ. ಹೊಸ ಅಡಿಕೆ ಬೆಲೆ 350 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆಯೂ ಯಾವುದೇ ವ್ಯತ್ಯಾಸವಾಗಿಲ್ಲ.ಇಂದು 490 ರೂ. ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ 530 ರೂ.ಗಳಷ್ಟೇ ಇದೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ಏರಿಕೆ ಅಥವಾ ಇಳಿಕೆಯಿಲ್ಲ. ಹೊಸ ಪಟೋರ ದರ 370 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 280 ರೂ.ಗಳಷ್ಟಿದೆ.  ಹೊಸ ಉಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ. ಇಂದು ಹೊಸ ಉಳ್ಳಿ  ದರ 150 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 220 ರೂ.ಗಳಾಗಿದೆ.

ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಬೆಲೆ ಮೊನ್ನೆಗೆ ಹೋಲಿಸಿದರೆ ಕೊಂಚವೇ ಹೆಚ್ಚಾಗಿದ್ದ 655 ರೂ.ಗಳಷ್ಟಾಗಿತ್ತು. ಒಣ ಕೊಬ್ಬರಿ ಬೆಲೆ ಯಥಾಸ್ಥಿತಿಯಲ್ಲಿದ್ದು 255 ರೂ.ಗಳಷ್ಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ