ಎಟಿಎಂನಿಂದ ಬಂತು ನಕಲಿ ರೂ.2000 ನೋಟು!

ಗುರುವಾರ, 15 ಡಿಸೆಂಬರ್ 2016 (07:54 IST)
ಅಧಿಕ ಮೌಲ್ಯದ ನೋಟುಗಳನ್ನು ನಿಷೇಧಿಸುವ ಮೂಲಕ ಸರಕಾರ ಕಪ್ಪುಹಣ, ಭ್ರಷ್ಟಾಚಾರ, ನಕಲಿ ನೊಟಿಗೆ ಅಂತ್ಯ ಹಾಡಲು ಹೊರಟಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೋ ಕಾದುನೋಡಬೇಕು ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.
 
ಈ ಎಲ್ಲಾ ಸಂದೇಹಗಳಿಗೆ ಉತ್ತರ ಸಿಗುವಂತೆ ಆದಾಯ ತೆರಿಗೆ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಪತ್ತೆಯಾಗುತ್ತಿದೆ. ಅಲ್ಲಲ್ಲಿ ನಕಲಿ ನೋಟುಗಳೂ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಒಂದರಲ್ಲಿ ಹೊಸ ರು.2,000 ನಕಲಿ ನೋಟು ಬಂದಿದೆ.
 
ಎಸ್‍ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಬಿಹಾರ ರಾಜ್ಯದ ಸೀತಾಮಹ್ರಿ ಜಿಲ್ಲೆಯ ಲಂಗ್ಮಾ ಪ್ರದೇಶದ ಪಂಕಜ್ ಕುಮಾರ್ ಎಂಬ ರೈತನಿಗೆ ಈ ನೋಟು ಸಿಕ್ಕಿದೆ. ಅಸಲಿ ನೋಟಿನಂತೇ ಇದ್ದ ಈ ನೋಟನ್ನು ಬೇರೆಯರಿಗೆ ಕೊಡಲು ಹೋಗಾದ ಅವರು ನಕಲಿ ಎಂದು ತಿರಸ್ಕರಿಸಿದ್ದಾರೆ. ಇದರಿಂದ ಚಕಿತಗೊಂಡ ಅವರು ಕೂಡಲೆ ಬ್ಯಾಂಕ್ ಶಾಖೆಗೆ ಹೋಗಿ ದೂರು ನೀಡಿದ್ದಾರೆ. 
 
ಅದೇ ರೀತಿ ಡುಮ್ರಾ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾನೆ. ಪಂಕಜ್ ದೂರಿನ ಮೇರೆಗೆ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡುಮ್ರಾ ಪಿಎಸ್ ವಿಜಯ್ ಬಹದೂರ್ ಸಿಂಗ್ ತಿಳಿಸಿದ್ದಾರೆ. ಪಂಕಜ್ ಡ್ರಾ ಮಾಡಿದ ಎಟಿಎಂ ಖಜಾನೆಯನ್ನು ಒಂದು ಖಾಸಗಿ ಸಂಸ್ಥೆ ನಿರ್ವಹಿಸುತ್ತಿದೆಯಂದು ಎಸ್‍ಬಿಐ ಮುಖ್ಯ ವ್ಯವಸ್ಥಾಪಕ ಸುಧಾಂಶು ಕುಮಾರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ