ಈ ದಿನದಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ ಬ್ಯಾಂಕ್ ಸಂಘಟನೆಗಳು
ಭಾನುವಾರ, 20 ಅಕ್ಟೋಬರ್ 2019 (07:09 IST)
ನವದೆಹಲಿ : ಬ್ಯಾಂಕುಗಳ ವಿಲೀನತೆಯನ್ನು ವಿರೋಧಿಸಿ ಇದೇ ಅಕ್ಟೋಬರ್ 22 ರಂದು ಬ್ಯಾಂಕ್ ಸಂಘಟನೆಗಳು ಮುಷ್ಕರಕ್ಕೆ ಕರೆಕೊಟ್ಟಿದೆ.
ಬ್ಯಾಂಕುಗಳ ವಿಲೀನ, ಠೇವಣಿಗಳ ಮೇಲಿನ ಬಡ್ಡಿದರ ಇಳಿಕೆ, ಕೆಲಸಗಳ ಹೊರಗುತ್ತಿಗೆ ವಿರೋಧಿಸಿ ಮತ್ತು ಹೊಸ ನೇಮಕಾತಿಗೆ ಒತ್ತಾಯಿಸಿ ಈ ಮುಷ್ಕರ ನಡೆಸುವುದಾಗಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ(ಎಐಬಿಇಎ) ಮತ್ತುಬ್ಯಾಂಕ್ ಉದ್ಯೋಗಿಗಳ ಭಾರತೀಯ ಒಕ್ಕೂಟವು ಹೇಳಿದೆ.
ಆದರೆ ಈ ಎರಡು ಸಂಘಟನೆಯಲ್ಲಿ ತನ್ನ ಉದ್ಯೋಗಿಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ ತಮ್ಮ ವಹಿವಾಟಿನಲ್ಲಿ ಹೆಚ್ಚಿನ ಧಕ್ಕೆ ಉಂಟಾಗುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಆದರೆ ಇತರ ಬ್ಯಾಂಕುಗಳು ತಮ್ಮ ವಹಿವಾಟನ್ನು ನಡೆಸುವ ಬಗ್ಗೆ ಕಳವಳ ವ್ಯಕ್ತಪಡಿಸಿವೆ.