ಬ್ಯಾಂಕ್‌ಗಳಿಗೆ ಐದು ದಿನಗಳ ರಜೆ: ಎಟಿಎಂ ಖಾಲಿಯಾಗುವ ಮುನ್ನವೇ ಹಣ ಪಡೆದುಕೊಳ್ಳಿ

ಶುಕ್ರವಾರ, 7 ಅಕ್ಟೋಬರ್ 2016 (16:52 IST)
ಬ್ಯಾಂಕ್ ಗ್ರಾಹಕರಿಗೊಂದು ಕಹಿ ಸುದ್ದಿ, ಇಂದಿನಿಂದ 5 ದಿನಗಳ ಸಾಲು ಸಾಲು ರಜೆಯಿರುವುದರಿಂದ ದೇಶದ ಅನೇಕ ಭಾಗಗಳಲ್ಲಿ ಬ್ಯಾಂಕ್ ಶಾಖೆಗಳು ವ್ಯವಹಾರ ಸ್ಥಗಿತಗೊಳಲ್ಲಿದೆ
 
ಅಕ್ಟೋಬರ್ 8 ರಂದು ಎರಡನೇ ಶನಿವಾರ, ಅಕ್ಟೋಬರ್ 9 ರಂದು ರವಿವಾರ, ಅಕ್ಟೋಬರ್ 10 ರಂದು ನವಮಿ, ಅಕ್ಟೋಬರ್ 11 ರಂದು ದಸರಾ ಹಬ್ಬ, ಅಕ್ಟೋಬರ್ 12 ರಂದು ಮೊಹರಂ ಹಬ್ಬವಿರುವುದರಿಂದ ಸತತ ಐದು ದಿನ ಬ್ಯಾಂಕ್‌ ವ್ಯವಹಾರ ಸ್ಥಗಿತಗೊಳ್ಳಲಿದೆ.
 
ಸತತ ಐದು ದಿನಗಳ ರಜೆಯಿರುವುದರಿಂದ ಎಟಿಎಂಗಳ ಹಣ ಬರಿದಾಗಿ ಗ್ರಾಹಕರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಹಬ್ಬಗಳ ನಡುವೆ ಹಣದ ಕೊರತೆ ಎದುರಿಸುವಂತಹ ಸ್ಥಿತಿ ಎದುರಾಗುತ್ತದೆ. 
 
ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಸೇವೆ, ವ್ಯವಹಾರದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಬ್ಯಾಂಕಿಂಗ್ ಚಟುವಟಿಕೆ ಸ್ಥಗಿತಗೊಳ್ಳುವ ಹಿನ್ನೆಲೆಯಲ್ಲಿ ಎಟಿಎಂ ಹೊಂದಿರುವ ಗ್ರಾಹಕರು ಸಹ ಎಟಿಎಂ ಮಶಿನ್‌ನಲ್ಲಿ ಔಟ್ ಆಫ್ ಕ್ಯಾಶ್ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
 
ಏತನ್ಮಧ್ಯೆ, ರಜೆಯ ದಿನಗಳಲ್ಲೂ ಎಟಿಎಂಗಳಲ್ಲಿ ಹಣ ಭರ್ತಿ ಮಾಡಲಾಗುವುದು ಎಂದು ಬ್ಯಾಂಕ್ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ