ಕಿತ್ತು ಹೋದ 200, 2000 ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ!
ಸೋಮವಾರ, 14 ಮೇ 2018 (14:02 IST)
ನವದೆಹಲಿ: ನಿಮ್ಮಲ್ಲಿ ಚಿಂದಿ ಆದ ಅಥವಾ ಕೊಳೆಯಾದ 200 ಅಥವಾ 2000 ರೂ. ನೋಟುಗಳಿವೆಯೇ? ಹಾಗಿದ್ದರೆ ಇನ್ನು ನಿಮಗೆ ಕಷ್ಟ ಗ್ಯಾರಂಟಿ!
ಇಂತಹ ನೋಟುಗಳಿದ್ದರೆ ಬ್ಯಾಂಕ್ ಗೆ ಹೋಗಿ ಹೊಸ ನೋಟು ಬದಲಾಯಿಸಿ ಪಡೆದುಕೊಳ್ಳಬಹುದಿತ್ತು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮದ ಪ್ರಕಾರ ಇನ್ನು ಅದು ಸಾಧ್ಯವಿಲ್ಲ. ಹಾಗಂತ ಮಾಧ್ಯಮ ವರದಿಯೊಂದು ಹೇಳಿದೆ.
2009 ರ ನಿಯಮಾವಳಿಯ ಪ್ರಕಾರ ಇನ್ನು ಬ್ಯಾಂಕ್ ಗಳು ಹರಿದ 1,2,5,10,20, 50,100, 500, 1000 ರೂ. ನೋಟುಗಳನ್ನು ಮಾತ್ರ ಆರ್ ಬಿಐ ಬದಲಿಸಿ ಕೊಡಲಿವೆ. ಈ ನಿಯಮದಡಿ 200 ಮತ್ತು 2000 ನೋಟುಗಳು ಬರುವುದಿಲ್ಲ. ಹಾಗಾಗಿ ಇನ್ನು ಮುಂದೆ ಈ ಎರಡು ನೋಟುಗಳನ್ನು ಬದಲಿಸಿಕೊಳ್ಳಬೇಕೆಂದರೆ ಸಾಧ‍್ಯವಾಗದು ಎಂದು ವರದಿಯೊಂದು ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.