ಬಿ.ಎಸ್‌.ಎನ್‌.ಎಲ್. ಬಿಡುಗಡೆ ಮಾಡಿದೆ 2 ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್

ಸೋಮವಾರ, 29 ಜುಲೈ 2019 (08:49 IST)
ನವದೆಹಲಿ : ಏರ್ಟೆಲ್, ವೊಡಾಫೋನ್, ರಿಲಯನ್ಸ್ ಜಿಯೋ ಕಂಪನಿಗಳ 1699 ರೂ. ಪ್ಲಾನ್ ಗೆ ಟಕ್ಕರ್ ನೀಡಲು ಬಿ.ಎಸ್‌.ಎನ್‌.ಎಲ್. 1001 ರೂ., ಮತ್ತು 1399 ರೂ. ಗಳ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್ ಗಳನ್ನು ಬಿಎಸ್‌ಎನ್‌ಎಲ್ ಪರಿಚಯಿಸಿದೆ.
ಇದರ 1001ರೂ.ಗಳ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಸ್ಥಳೀಯ, ಎಸ್.ಟಿ.ಡಿ., ರೋಮಿಂಗ್ ಅನಿಯಮಿತ ಕರೆಗಳು 270 ದಿನಗಳ ಅವಧಿಗೆ 9 ಜಿಬಿ ಡೇಟಾ 750 ಎಸ್‌ಎಂಎಸ್ ಸೌಲಭ್ಯವಿದೆ. ಇದು 270 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಹಾಗೇ 1399 ರೂ. ಪ್ಲಾನ್ ನಲ್ಲಿ ಸ್ಥಳೀಯ, ಎಸ್.ಟಿ.ಡಿ., ರೋಮಿಂಗ್ ಅನಿಯಮಿತ ಕರೆಗಳು, ಪ್ರತಿದಿನ 1.50 ಜಿಬಿ ಡೇಟಾ, 50 ಎಸ್.ಎಂ.ಎಸ್. ಸೌಲಭ್ಯವಿದೆ. ಇದು ಕೂಡ 270 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ