ತನ್ನ 899 ರೂ ಪ್ಲಾನ್ ನನ್ನು ಸಡಿಲಗೊಳಿಸಿದ ಬಿ.ಎಸ್.​ಎನ್​.ಎಲ್​

ಸೋಮವಾರ, 23 ಸೆಪ್ಟಂಬರ್ 2019 (06:03 IST)
ಬೆಂಗಳೂರು : ಬಿ.ಎಸ್.​ಎನ್​.ಎಲ್​ ಸಂಸ್ಥೆ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ತನ್ನ 899 ರೂ. ಬೆಲೆಯ ಪ್ಲಾನ್​​ ಅನ್ನು ಸಡಿಲಗೊಳಿಸಿದೆ.
ಬಿ.ಎಸ್.​ಎನ್​.ಎಲ್ ಗ್ರಾಹಕರಿಗಾಗಿ ತನ್ನ 899 ರೂ. ಬೆಲೆಯ ಪ್ಲಾನ್​​ ಅನ್ನು ಸಡಿಲಗೊಳಿಸಿ 799 ರೂ. ಗೆ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಗ್ರಾಹಕರಿಗೆ 100 ರೂ. ಡಿಸ್ಕೌಂಟ್​ ನೀಡುತ್ತಿದೆ. ಈ ನೂತನ ಪ್ಲಾನ್​ ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದವರಿಗೆ ಮಾತ್ರ ಲಭ್ಯವಿದೆ.


ಈ 799 ರೂ. ಪ್ರಿಪೇಯ್ಡ್​ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾವನ್ನು ಉಚಿತವಾಗಿ ಸಿಗಲಿದೆ. ಜೊತೆಗೆ ಅನಿಯಮಿತ ಲೋಕಲ್​/ಎಸ್ ​ಟಿಡಿ ಕರೆಯನ್ನು ನೀಡಿದೆ. ಹಾಗೇ ಪ್ರತಿ ದಿನ 50 SMS ಗಳನ್ನು ಉಚಿತವಾಗಿ ನೀಡುತ್ತಿದೆ. ಈ ಪ್ಲಾನ್ 180 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ