ಕೇಂದ್ರದ ತೆರಿಗೆ ಪಾಲು: ಕರ್ನಾಟಕಕ್ಕೆ ಕೊಟ್ಟ ಮೊತ್ತ ನೋಡಿದ್ರೆ ಸಿದ್ದರಾಮಯ್ಯ ರೊಚ್ಚಿಗೇಳುವುದು ಪಕ್ಕಾ

Krishnaveni K

ಶನಿವಾರ, 11 ಜನವರಿ 2025 (10:55 IST)
ನವದೆಹಲಿ: ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ತೆರಿಗೆ ಪಾಲು ಹಂಚಿಕೆ ಮಾಡಿದೆ. ಕರ್ನಾಟಕಕ್ಕೆ ಸಿಕ್ಕ ತೆರಿಗೆ ಪಾಲು ನೋಡಿದರೆ ಸಿಎಂ ಸಿದ್ದರಾಮಯ್ಯ ರೊಚ್ಚಿಗೇಳುವುದು ಪಕ್ಕಾ ಎನ್ನಬಹುದು.

ಕೇಂದ್ರದ ತೆರಿಗೆ ಪಾಲು ಹಂಚಿಕೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಸಿಂಹ ಪಾಲು ಪಡೆದಿದೆ. ಉತ್ತರ ಪ್ರದೇಶಕ್ಕೆ 31039 ಕೋಟಿ ರೂ. ಬಿಹಾರಕ್ಕೆ 17403.36 ಕೋಟಿ ರೂ. ಪಾಲು ಸಿಕ್ಕಿದೆ. ಆದರೆ ಕರ್ನಾಟಕಕ್ಕೆ ಕೇವಲ 6310 ಕೋಟಿ ರೂ. ಅಷ್ಟೇ ಸಿಕ್ಕಿದೆ.

ಕಳೆದ ವರ್ಷವೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ತೆರಿಗೆ ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗುತ್ತಿದೆ ಎಂದು ದೆಹಲಿಗೆ ಹೋಗಿ ಹೋರಾಟ ನಡೆಸಿದ್ದವು. ಈ ಬಾರಿಯೂ ಬಿಹಾರ, ಉತ್ತರ ಪ್ರದೇಶಕ್ಕೇ ಹೆಚ್ಚು ಪಾಲು ನೀಡಿರುವುದರಿಂದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಆಡಳಿತವಿರುವ ರಾಜ್ಯಗಳು ಹೋರಾಟ ನಡೆಸುವುದು ಖಚಿತವಾಗಿದೆ.

ಕೇಂದ್ರ ಸರ್ಕಾರವು ಶೇ.410 ರಷ್ಟು ತೆರಿಗೆ ಸಂಗ್ರಹ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ರಾಜ್ಯಗಳಲ್ಲಿ ಕಂತು ಕಂತುಗಳಾಗಿ ಹಣ ಬಿಡುಗಡೆ ಮಾಡಲಾಗು್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಯಾವ ರಾಜ್ಯಕ್ಕೆ ಎಷ್ಟು?
ತೆರಿಗೆ ಪಾಲು ಹಂಚಿಕೆಯಲ್ಲಿ ಬಿಹಾರ ಸಿಂಹಪಾಲು ಪಡೆದಿದ್ದರೆ ಉತ್ತ ಪ್ರದೇಶಕ್ಕೂ ದೊಡ್ಡ ಮೊತ್ತವೇ ಸಿಕ್ಕಿದೆ. ಉಳಿದಂತೆ ಮಧ್ಯಪ್ರದೇಶಕ್ಕೆ 13582.86 ಕೋಟಿ ರೂ., ಮಹಾರಾಷ್ಟರಕ್ಕೆ 10930.31  ಕೋಟಿ ರೂ., ರಾಜಸ್ಥಾನಕ್ಕೆ 10426.78 ಕೋಟಿ ರೂ., ಪಶ್ಚಿಮ ಬಂಗಾಲಕ್ಕೆ 13017.06 ಕೋಟಿ ರೂ., ಗೋವಾಕ್ಕೆ 667.91 ಕೋಟಿ ರೂ., ಸಿಕ್ಕಿಂಗೆ 671.35 ಕೋಟಿ ರೂ. ಪಾಲು ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ