ಆಧಾರ್ ನಂಬರ್ ನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ ಮಾಡುವ ಮುನ್ನ ಗ್ರಾಹಕರಿಗೆ ಈ ವಿಚಾರ ತಿಳಿದಿರಲಿ

ಬುಧವಾರ, 3 ಅಕ್ಟೋಬರ್ 2018 (08:13 IST)
ಬೆಂಗಳೂರು : ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೇರೆಗೆ ಆಧಾರ್ ನಂಬರ್ ನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ ಮಾಡುವ ಗ್ರಾಹಕರಿಗೆ ಒಂದು ಎಚ್ಚರಿಕೆ. ನೀವು ಆಧಾರ್ ನಂಬರ್ ನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ ಮಾಡಿದರೆ, ಕೇಂದ್ರ ಸರಕಾರ ಎಲ್.ಪಿ.ಜಿ. ಮೇಲೆ ನೀಡುವ ಸಬ್ಸಿಡಿ ದೊರೆಯುವುದಿಲ್ಲವಂತೆ.

ಪೆಟ್ರೋಲಿಯಂ ಇಲಾಖೆ ಅಧಿಕಾರಿಗಳ ಪ್ರಕಾರ, ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಕಡ್ಡಾಯವಲ್ಲದಿದ್ದರೂ, ಎಲ್.ಪಿ.ಜಿ. ಸಿಲಿಂಡರ್ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ. ಆದಕಾರಣ ಬ್ಯಾಂಕ್ ಖಾತೆಯಿಂದ ಆಧಾರ್ ಡಿಲಿಂಕ್ ಮಾಡಿದ ಕೂಡಲೇ ಈ ಸಬ್ಸಿಡಿ ಹಣ ಸಿಗುವುದಿಲ್ಲ ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯಿಂದ ಹಿಂಪಡೆಯಬಹುದು. ಆದರೆ ಈ ರೀತಿ ಮಾಡಿದ ಬಳಿಕ, ತೈಲ ಕಂಪನಿಗಳಿಗೆ ಮತ್ತೊಮ್ಮೆ ಎಲ್ಲ ದಾಖಲೆಗಳನ್ನು ನೀಡಬೇಕು ಎಂದಿದ್ದಾರೆ.


 

ಕೇಂದ್ರ, ಎಲ್.ಪಿ.ಜಿ. ಸಿಲಿಂಡರ್ ಮೇಲೆ ನೀಡುವ ಸಬ್ಸಿಡಿ ಹಣವನ್ನು, ಆಧಾರ್ ಪೇಮೆಂಟ್ ಡೈರೆಕ್ಟ್ ಮೂಲಕ ಒದಗಿಸಲಾಗುತ್ತದೆ. ಗ್ರಾಹಕರು ಖಾತೆಯಿಂದ ಆಧಾರ್ ಡಿಲಿಂಕ್ ಮಾಡಿದರೆ, ನೆಟ್ ವರ್ಕ್ ನಲ್ಲಿ ಸಮಸ್ಯೆಯಾಗುವುದರಿಂದ, ಕಡ್ಡಾಯವಾಗಿ ಮತ್ತೊಮ್ಮೆ ಆಧಾರ್ ದಾಖಲೆಗಳನ್ನು ನೀಡಬೇಕು ಎಂದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ