ಟಾಟಾ ಸನ್ಸ್ ಮಂಡಳಿಯಿಂದ ಸೈರಸ್ ಮಿಸ್ತ್ರಿ ವಜಾ

ಮಂಗಳವಾರ, 7 ಫೆಬ್ರವರಿ 2017 (10:12 IST)
ಟಾಟಾ ಸನ್ಸ್ ಮಂಡಳಿಯಿಂದ ಅದರ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿಯನ್ನು ಸೋಮವಾರ ವಜಾ ಮಾಡಲಾಗಿದ್ದು, ಕಂಪೆನಿಯ ಪಾಲುದಾರರು ಮಿಸ್ತ್ರಿ ವಜಾ ನಿರ್ಣಯದ ಪರ ಮತಹಾಕಿದ್ದು ವಜಾ ಮಾಡುಲು ಅಗತ್ಯ ಬಹುಮತ ಸಿಕ್ಕಿದೆ ಎಂದು ಕಂಪೆನಿ ತಿಳಿಸಿದೆ. 
 
ಟಾಟಾ ಸನ್ಸ್ ನಿರ್ದೇಶಕ ಹುದ್ದೆಯಿಂದ ಮಿಸ್ತ್ರಿಯನ್ನು ವಜಾಗೊಳಿಸಲು ಪಾಲುದಾರರಿಂದ ಅಗತ್ಯ ಬಹುಮತ ಸಿಕ್ಕಿದ್ದು ಅವರನ್ನು ವಜಾಗೊಳಿಸಲಾಗಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.  ಮಿಸ್ತ್ರಿ ವಜಾಗೆ ಸಂಬಂಧಿಸಿದಂತೆ ಕಳೆದ ತಿಂಗಳು ಟಾಟಾ ಸನ್ಸ್ ವಿಶೇಷ ಸಾಮಾನ್ಯ ಸಭೆ ಕರೆದಿತ್ತು. ಇದನ್ನು ಮಿಸ್ತ್ರಿ ಪ್ರಶ್ನಿಸಿದ್ದರು. 
 
ಟಾಟಾ ಸನ್ಸ್ ಅ.24ರಂದು ಮಿಸ್ತ್ರಿ ಅವರನ್ನು ಮುಖ್ಯಸ್ಥರ ಹುದ್ದೆಯಿಂದ ವಜಾಗೊಳಿಸಿತ್ತು. ಟಾಟಾ ಮೋಟಾರ್ಸ್ ಮತ್ತು ಟಿಸಿಎಸ್‌ನಿಂದಲೂ ವಜಾಗೊಳಿಸುವಂತೆ ಆಗ್ರಹಿಸಿತ್ತು. ಅದಾದ ಬಳಿಕ ಮಿಸ್ತ್ರಿ ಆರು ಕಂಪೆನಿಗಳ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದರು. ಈ ಮೂಲಕ ಭಾರತದ ಅತ್ಯಂತ ಹಳೆಯ ಸಂಘಟಿತ ವ್ಯಾಪಾರಿ ಸಂಸ್ಥೆ ಟಾಟಾ ಮತ್ತು ಮಿಸ್ತ್ರಿ ನಡುವಿನ ಮತ್ತೊಂದು ಸಮರ ಅಂತ್ಯವಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ