ದೇಶದಲ್ಲಿ 100 ಕೋಟಿ ಜನರಿಗೆ ಇಂಟರ್‌ನೆಟ್‌ ಸೌಲಭ್ಯವಿಲ್ಲ, ಡಿಜಿಟಲ್ ಇಂಡಿಯಾ ಸಾಧ್ಯನಾ?

ಮಂಗಳವಾರ, 27 ಡಿಸೆಂಬರ್ 2016 (16:54 IST)
ನೋಟು ನಿಷೇಧದ ನಂತರ ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾ ಮತ್ತು ಡಿಜಿಟಲ್ ಪೇಮೆಂಟ್‌ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದಾಗ್ಯೂ ದೇಶದಲ್ಲಿ 950 ಮಿಲಿಯನ್ ಜನ ಇಂಟರ್‌ನೆಟ್ ಸೌಲಭ್ಯ ಹೊಂದಿಲ್ಲ ಎನ್ನುವುದು ಹೊಸ ಅಧ್ಯಯನದಿಂದ ಬಹಿರಂಗವಾಗಿದೆ.
 
ಅಸೋಚಾಮ್ ಮತ್ತು ಡೆಲೊಯಿಟ್ಟೆ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ 100 ಕೋಟಿ ಜನರು ಇಂಟರ್‌ನೆಟ್ ಸೌಲಭ್ಯ ಹೊಂದಿಲ್ಲ ಎನ್ನುವುದು ಬಹಿರಂಗವಾಗಿದೆ.
 
ಡಿಜಿಟಲ್ ಇಂಡಿಯಾ, ನಗದು ರಹಿತ ದೇಶವಾಗಿ ಪರಿವರ್ತಿಸಲು ಹರಸಾಹಸ ಪಡುತ್ತಿರುವ ಕೇಂದ್ರ ಸರಕಾರಕ್ಕೆ ಹೊಸ ವರದಿ ಆಘಾತ ತಂದಿದೆ.
 
ಆಸಕ್ತಿಕರ ವಿಷಯವೆಂದರೆ, ದೇಶದಲ್ಲಿ ಮೊಬಾಲ್ ಡೇಟಾ ಪ್ಲ್ಯಾನ್ ದರ ವಿಶ್ವದಲ್ಲಿಯೇ ಅಗ್ಗವಾಗಿದೆ. ಸ್ಮಾರ್ಟ್‌ಫೋನ್‌ಗಳ ದರಗಳು ಕೂಡಾ ದಿನಗಳದಂತೆ ಅಗ್ಗವಾಗುತ್ತಿರುವ ಮಧ್ಯೆಯೂ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ.  
 
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ನವೆಂಬರ್‌ 8 ರ ನೋಟು ನಿಷೇಧದ ನಂತರ ಡಿಜಿಟಲ್ ಎಕಾನಾಮಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
 
ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪೆನಿಗಳ ಸಹಭಾಗಿತ್ವದಲ್ಲಿ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅಸೋಚಾಮ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ