ಟಿವಿಎಸ್‍‍ನ ಹೈಬ್ರಿಡ್ ಸ್ಕೂಟರ್ ಹೇಗಿದೆ ಗೊತ್ತಾ..?

ಮಂಗಳವಾರ, 19 ಜೂನ್ 2018 (16:20 IST)
ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ನವೀನ ಪ್ರಯೋಗಗಳ ಮೂಲಕ ಗ್ರಾಹಕರ ಮನಗೆದ್ದಿರುವ ಟಿವಿಎಸ್ ಮೋಟಾರ್ ಸಂಸ್ಥೆ ಇದೀಗ ನೂತನ ಪ್ರಯೋಗವೊಂದಕ್ಕೆ ಕೈ ಹಾಕಿದೆ. ಹೌದು ಗ್ರಾಹಕರ ಅಭಿರುಚಿ ಆಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಸಂಸ್ಥೆ ತನ್ನ ನೂತನ ಬೈಕ್ ಅನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಆಟೋ ಉದ್ಯಮದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ವಿನ್ಯಾಸದ ಬೈಕು, ಸ್ಕೂಟರ್ ಮಾದರಿಗಳು ಲಗ್ಗೆ ಇಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸ್ಕೂಟರ್‌ಗಳು ಹೆಚ್ಚಿನ ಬೇಡಿಕೆಯನ್ನು ಸಾಧಿಸಿವೆ ಎಂದೇ ಹೇಳಬಹುದು. ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ ಸ್ಕೂಟರ್‌ಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದು ಅದಕ್ಕಾಗಿ ದ್ವೀಚಕ್ರ ತಯಾರಿಕೆ ಉದ್ಯಮದಲ್ಲಿ ಸ್ಕೂಟರ್ ತಯಾರಿಕೆಯಲ್ಲಿ ನವೀನತೆಯನ್ನು ತರಲು ಕಂಪನಿಗಳು ಪೈಪೋಟಿಗೆ ಬಿದ್ದಿದ್ದು, ಟಿವಿಎಸ್ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಎಕ್ಸ್ ಪೋನಲ್ಲಿ ಪ್ರದರ್ಶಿಸಿದ್ದ ಟಿವಿಎಸ್ ಐಕ್ಯೂಬ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿದೆ.
ಹಾಗಾದರೆ ಈ ಸ್ಕೂಟರ್‌ನಲ್ಲಿ ಅಂತಹ ವಿಶೇಷವೇನಿದೆ ಎನ್ನುವ ಕೂತುಹಲ ಈ ಸ್ಕೂಟರ್‌ನ ವಿನ್ಯಾಸವನ್ನು ನೋಡಿದಾಗ ಎಂತಹವರಿಗಾದೂ ಅನಿಸದೇ ಇರಲಾರದು. ಹೌದು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಕೂಟರ್ ನೋಡುವುದಕ್ಕೆ ಮಾತ್ರವಲ್ಲದೇ ತನ್ನ ವೈಶಿಷ್ಟ್ಯಗಳಿಂದಲೂ ಗಮನ ಸೆಳೆದಿದೆ ಎಂದೇ ಹೇಳಬಹುದು.
 
ಈ ಟಿವಿಎಸ್ ಐಕ್ಯೂಬ್ ಸ್ಕೂಟರ್ 110 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿರುವುದರ ಜೊತೆಗೆ ಎಲೆಕ್ಟ್ರಿಕ್ ಮೋಟಾರನ್ನು ಹೊಂದಿದೆ. ಇದರಲ್ಲಿ ನಾಲ್ಕು ಸ್ಪೀಡ್ ಗೇರ್‌ಬಾಕ್ಸ್ ಇದ್ದು ಸುಲಭವಾಗಿ ಚಲಾಯಿಸಬಹುದಾಗಿದೆ.ಟಿವಿಎಸ್ ಐಕ್ಯೂಬ್ ಸ್ಕೂಟರ್ 150 ವಾಟ್ಸ್ ಮತ್ತು 500 ವಾಟ್ಸ್ ಎಂಬ ಎರಡು ಬ್ಯಾಟರಿಯನ್ನು ಹೊಂದಿದ್ದು, ಮುಂಭಾಗದಲ್ಲಿ ಆಕರ್ಷಕ ಹೆಡ್‌ಲ್ಯಾಂಪ್ ಹೊಂದಿದೆ ಮತ್ತು ಹಿಂಬದಿಯಲ್ಲಿರುವ ಬ್ರೇಕ್ ಲೈಟ್ ಸ್ಕೂಟರ್‌ನ ಅಂದವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ ಇದು ಹೈಬ್ರಿಡ್ ಎಕಾನಮಿ ಮತ್ತು ಹೈಬ್ರಿಡ್ ಪವರ್ ಮೋಡ್‌ಗಳನ್ನು ಈ ಸ್ಕೂಟರ್ ಹೊಂದಿದ್ದು ಇದರ ಮೂಲಕ ಹೆಚ್ಚು ಶಕ್ತಿ ಸಂಗ್ರಹಣೆ ಮಾಡುವುದರ ಜೊತೆಗೆ ಇಂಧನ ಕ್ಷಮತೆಯನ್ನು ನಾವು ಇದರಲ್ಲಿ ಕಾಣಬಹುದಾಗಿದೆ.
 
ಈ  ಸ್ಕೂಟರಿನ ಹೊರ ವಿನ್ಯಾಸವು ಇತರ ಸ್ಕೂಟರ್‌ಗಳಿಗೆ ಹೋಲಿಸಿದರೆ ವಿಭಿನ್ನವಾಗಿದ್ದು ಆಕರ್ಷಕವಾಗಿದೆ ಅಷ್ಟೇ ಅಲ್ಲ ಇದರ ಗ್ರಾಫಿಕ್ಸ್ ವಿನ್ಯಾಸವು ಉತ್ತಮವಾಗಿದ್ದು, ವಿಲ್‌ಗಳು ಉತ್ತಮವಾಗಿದ್ದು,  ನಗರ ಪ್ರದೇಶಗಳಲ್ಲಿ ಈ ಸ್ಕೂಟರ್ ಉತ್ತಮ ಎಂದೇ ಹೇಳಲಾಗುತ್ತಿದೆ. ಇದು ಟಿವಿಎಸ್‌ನ ಚೊಚ್ಚಲ ಹೈಬ್ರಿಡ್ ಸ್ಕೂಟರ್‌ ಆಗಿದ್ದು, ಈಗಾಗಲೇ ಅದನ್ನು ಮಾರುಕಟ್ಟೆಗೆ ತರಲು ಕಂಪನಿ ಸಕಲ ಸಿದ್ಧತೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ. ಟಿವಿಎಸ್ ಸಂಸ್ಧೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಮೂಲಗಳ ಪ್ರಕಾರ ಮುಂದಿನ ವರ್ಷ ಮಾರುಕಟ್ಟೆಗೆ ಪ್ರವೇಶಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಲ್ಲಿ ಇತರ ಸ್ಕೂಟರ್‌ಗಳಿಗೆ ಇದು ಟಕ್ಕರ್ ನೀಡುವುದೇ ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ