ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆಯ ಜೋಡಣೆಯ ಗಡುವು ವಿಸ್ತರಣೆ; ಕೇಂದ್ರದಿಂದ ಆದೇಶ

ಭಾನುವಾರ, 1 ಜುಲೈ 2018 (14:27 IST)
ನವದೆಹಲಿ: ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆಯ ಜೋಡಣೆಗೆ ನೀಡಿದ ಗಡುವನ್ನು ಈಗ ಮತ್ತೆ ವಿಸ್ತರಿಸಲಾಗಿದೆ. 2019ರ ಮಾರ್ಚ್ 31ರವರೆಗೂ ಜೊಡಣೆಗೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಜೂನ್ 30 ರಂದು ಕೊನೆಯಾಗಬೇಕಿದ್ದ  ಗಡುವನ್ನು ಕೇಂದ್ರ ನೇರ ತೆರಿಗೆ ಮಂಡಳಿ ಮತ್ತೆ ವಿಸ್ತರಿಸಿದೆ.


ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 119ರ ಅಡಿಯಲ್ಲಿ ಈ ಗಡುವನ್ನು ವಿಸ್ತರಿಸಲಾಗಿದೆ. ಈ ಮೊದಲು ಮಾರ್ಚ್ 27ರಂದು ಗಡುವು ವಿಸ್ತರಣೆ ಮಾಡಿದ್ದ ಇಲಾಖೆ, ಜೂನ್ 30 ರವರೆಗೆ ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆಯ ಜೋಡಣೆ ಮಾಡಬಹುದೆಂದು ಹೇಳಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ