ಆಕಾಶ ಮಾರ್ಗದಲ್ಲಿ ಓಡಾಡಲಿದೆ ಡ್ರೋನ್ ಕಾರು

ಗುರುವಾರ, 5 ಜನವರಿ 2017 (10:25 IST)
ಇನ್ನೇನು ಕೆಲವೇ ವರ್ಷಗಳಲ್ಲಿ ಡ್ರೋನ್ ಕಾರು ಆಕಾಶ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಸುಮಾರು 1,500 ಕಿ.ಲೋ ತೂಕವುಳ್ಳ ಈ ಪ್ಯಾಸೆಂಜರ್ ಡ್ರೋನ್ 2020ರ ವೇಳೆಗೆ ಮಾರುಕಟ್ಟೆಗೆ ಬರಲಿದೆ. ಇಸ್ರೇಲ್ ಮೂಲದ ಒಂದು ಕಂಪನಿ ಇದನ್ನು ತಯಾರಿಸಿದೆ.
 
ಇದು ಸುಮಾರು 500 ಕೆ.ಜಿ ತೂಕವನ್ನು ಸಾಗಿಸಲಿದೆ. ಬೆಲೆ ಅಂದಾಜು ರೂ.950 ಕೋಟಿ ಆಗಬಹುದು. ಇಸ್ರೇಲ್‌ನ ಅರ್ಬನ್ ಏರೋನಾಟಿಕಲ್ ಸಂಸ್ಥೆ ಇದನ್ನು ತಯಾರುತ್ತದೆ. "ಒಂದೇ ಒಂದು ಸಲ ಊಹಿಸಿಕೊಳ್ಳಿ...ಯಾವುದಾದರೂ ವಿಷವಾಯು ನಿಮ್ಮ ನಗರದಲ್ಲಿ ಲೀಕ್ ಆದರೆ...ಆಟೋಮೆಟಿಕ್ ಡ್ರೋನ್ ಬಂದು ಜನರನ್ನು ರಕ್ಷಿಸಿದರೆ ಹೇಗಿರುತ್ತೆ" ಎಂದಿದ್ದಾರೆ ಅರ್ಬನ್ ಏರೋನಾಟಿಕ್ ಸಂಸ್ಥೆ ಸಿಇಓ ರಾಫಿ ಯೋಲಿ 
 
ಜನವಾಸಗಳ ನಡುವೆ ಸುರಕ್ಷಿತವಾಗಿ ಪ್ರಯಾಣಿಸುವ ಡ್ರೋನ್‌ಗಳನ್ನು ತಯಾರಿಸಲು 2001ರಲ್ಲಿ ಈ ಸಂಸ್ಥೆಯನ್ನು ಕೇಂದ್ರ ಇಸ್ರೇಲ್‍ನಲ್ಲಿ ಸ್ಥಾಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಇನ್ನೂ ಸ್ವಲ್ಪ ಕೆಲಸಗಳು ಬಾಕಿ ಇವೆ. ’ಏರ್ ಮ್ಯೂಲ್’ ಎಂದು ಕರೆಯುವ ಈ ಡ್ರೋನ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಮಾಣಪತ್ರ ಪಡೆಯಬೇಕಾಗಿದೆ. ಇದರ ಹೆಸರಿನಲ್ಲಿ ಇದುವರೆಗೆ 39 ಪೇಟೆಂಟ್‌ಗಳು ನೋಂದಣಿ ಆಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ