ಲ್ಯಾಂಡ್ ಲೈನ್ ​​ಗ್ರಾಹಕರಿಗಾಗಿ ಬಿ.ಎಸ್‌.ಎನ್‌.ಎಲ್ ನಿಂದ ಉಚಿತ ಬ್ರಾಡ್ಬ್ಯಾಂಡ್ ಸೇವೆ

ಭಾನುವಾರ, 17 ಮಾರ್ಚ್ 2019 (07:08 IST)
ನವದೆಹಲಿ : ಬಿ.ಎಸ್‌.ಎನ್‌.ಎಲ್. ಸಂಸ್ಥೆ ತನ್ನ ಎಲ್ಲಾ ಲ್ಯಾಂಡ್ ಲೈನ್ ​​ಗ್ರಾಹಕರಿಗಾಗಿ  ಉಚಿತ ಬ್ರಾಡ್ಬ್ಯಾಂಡ್ ಸೇವೆಯನ್ನು ಘೋಷಿಸಿದೆ.


ಈ ಉಚಿತ ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಬಿ.ಎಸ್‌.ಎನ್‌.ಎಲ್.  ಲ್ಯಾಂಡ್ಲೈನ್ ​​ಗ್ರಾಹಕರು ಉಚಿತ ಹೈ ಸ್ಪೀಡ್ ಹೋಮ್ ವೈಫೈ ಸೇವೆಯನ್ನು ಆನಂದಿಸಬಹುದು. ಬಿ.ಎಸ್‌.ಎನ್‌.ಎಲ್. 10 ಎಂಬಿಪಿಎಸ್ ವೇಗದಲ್ಲಿ ದಿನಕ್ಕೆ 5 ಜಿಬಿ ಡೌನ್ಲೋಡ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಅಸ್ತಿತ್ವದಲ್ಲಿರುವ ಬ್ರಾಡ್ಬ್ಯಾಂಡ್ ಗ್ರಾಹಕರು ಶೂನ್ಯ ವೆಚ್ಚದಲ್ಲಿ 25 ಪ್ರತಿಶತ ಕ್ಯಾಶ್ಬ್ಯಾಕ್ ಮತ್ತು ಅಮೆಜಾನ್ ಚಂದಾದಾರಿಕೆಗಳಂತಹ ರೋಮಾಂಚಕಾರಿ ಕೊಡುಗೆಗಳನ್ನು ಪಡೆಯಬಹುದಾಗಿದೆ.


ಗ್ರಾಹಕರು ಈ ಬ್ರಾಡ್ಬ್ಯಾಂಡ್ ಸೇವೆಯನ್ನು ನಿಮ್ಮದಾಗಿಸಲು ಕೇವಲ ಒಂದು ಕರೆ ಮಾಡಿದರೆ ಸಾಕು. ನೋಂದಾಯಿತ ಮೊಬೈಲ್ ನಿಂದ ಅಥವಾ ಲ್ಯಾಂಡ್ಲೈನ್ ​​ಸಂಖ್ಯೆಯಿಂದ ಬಿ.ಎಸ್‌.ಎನ್‌.ಎಲ್. ಟೋಲ್ ಫ್ರೀ ಸಹಾಯವಾಣಿ ​​18003451504 ಗೆ ಡಯಲ್ ಮಾಡುವ ಮೂಲಕ ಈ ಯೋಜನೆಯನ್ನು ಪಡೆಯಬಹುದು. ಹೋಮ್ ವೈಫೈ ಇನ್ಸ್ಟಾಲ್ ಮಾಡಲು ಯಾವುದೇ ಶುಲ್ಕಗಳು ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ