ಫ್ರೀಚಾರ್ಜ್ ಜತೆ ಕೈಜೋಡಿಸಿದ ಫಾಸೋಸ್

ಗುರುವಾರ, 29 ಡಿಸೆಂಬರ್ 2016 (09:32 IST)
ಆನ್‍ಲೈನ್‌ ಆರ್ಡರ್ ಮೂಲಕ ಆಹಾರವನ್ನು ಡೆಲಿವರಿ ಮಾಡುವ ಫಾಸೋಸ್ ಸಂಸ್ಥೆ ಭಾರತದಲ್ಲಿ ಡಿಜಿಟಲ್ ನಗದು ಸೇವೆಗಳನ್ನು ನೀಡುತ್ತಿರುವ ಫ್ರೀಚಾರ್ಜ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಆಹಾರ, ಶೀತಲಪಾನೀಯಗಳ ವಿಭಾಗದಲ್ಲಿ ಫುಡ್‍ಪಾಂಡಾ, ಜೊಮಾಟೋ, ಫ್ರೆಶ್‍ಮೆನು, ಇನ್ನರ್‌ಚೆಫ್, ಡೊಮಿನೋಸ್, ಹಲ್ದಿರಾಮ್ಸ್, ಸಿಸಿಡಿ, ಬರಿಸ್ಟಾಲು ಈಗಾಗಲೆ ಫ್ರೀಚಾರ್ಜರ್ ಜತೆ ಒಪ್ಪಂದಗಳನ್ನು ಮಾಡಿಕೊಂಡಿವೆ.
 
ಇನ್ನುಮುಂದೆ ಫಾಸೋಸ್ ಗ್ರಾಹಕರು ಸಹ ಫ್ರೀಚಾರ್ಜರ್ ಮೂಲಕ ಆನ್‌ಲೈನ್ ಪೇಮೆಂಟ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. "ಫಾಸೋಸ್‌ಗೆ ಇ-ವ್ಯಾಲೆಟ್ ಪಾಲುದಾರಿಕೆ ಸಿಕ್ಕಿರುವುದು ಸಂತೋಷ ತಂದಿದೆ. ಈ ಒಪ್ಪಂದದಿಂದ ಎರಡೂ ಕಂಪನಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿ" ಎಂದು ಆಶಿಸುತ್ತಿರುವುದಾಗಿ ಫ್ರೀಚಾರ್ಜ್ ಬಿಜಿನೆಸ್ ಅಧಿಕಾರಿ ಸುದೀಪ್ ಟಾಂಡನ್ ಹೇಳಿದ್ದಾರೆ.
 
ಭಾರತದ 14 ನಗರಗಳಲ್ಲಿನ 130 ಪ್ರದೇಶಗಳಿಂದ ಸುಮಾರು 15 ಸಾವಿರ ಮಂದಿ ಗ್ರಾಹಕರಿಗೆ ಪ್ರತಿನಿತ್ಯ ಆಹಾರ ಸರಬರಾಜು ಮಾಡುತ್ತಿದೆ ಫಾಸೋಸ್. ಈ ನಗರಗಳಲ್ಲಿ ಬೆಂಗಳೂರು ಸೇರಿದಂತೆ ಹೈದರಾಬಾದ್, ಮುಂಬೈ, ಪುಣೆ, ಚೆನ್ನೈ, ನವದೆಹಲಿ, ಗುರಗಾಂವ್, ನೋಯ್ಡಾ, ಘಜಿಯಾಬಾದ್, ಅಹಮದಾಬಾದ್, ವಡೋದರ, ಇಂದೋರ್, ಭೋಪಾಲ್, ನಾಗಪುರ ನಗರಳಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ