ಫ್ರೀಡಂ 251 ವಿತರಣೆ ದಿನಾಂಕ ಜುಲೈ 7 ಕ್ಕೆ ಮುಂದೂಡಿದ ರಿಂಗಿಂಗ್ ಬೆಲ್ ಕಂಪೆನಿ

ಬುಧವಾರ, 29 ಜೂನ್ 2016 (19:12 IST)
ವಿಶ್ವದ ಅತೀ ಕಡಿಮೆ ದರದ ಸ್ಮಾರ್ಟ್‌ಪೋನ್ ನೀಡುವುದಾಗಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿ ನಂತರ ಅನೇಕ ವಿವಾದಗಳಿಗೆ ಕಾರಣವಾಗಿದ್ದ ರಿಂಗಿಂಗ್ ಬೆಲ್ಸ್, ಪ್ರೀಡಂ-251 ವಿತರಣೆಗೆ ನಿಗದಿಯಾಗಿದ್ದ ದಿನಾಂಕವನ್ನು ಮುಂದೂಡಿದ್ದು, ಜುಲೈ 7 ರಂದು ಪೋನ್‌ಗಳನ್ನು ವಿತರಿಸುವುದಾಗಿ ತಿಳಿಸಿದೆ. 
 
ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ ಎಂದು ರಿಂಗಿಂಗ್ ಬೆಲ್ಸ್ ಪೋನ್‌ ತಯಾರಕರು ತಿಳಿಸಿದ್ದಾರೆ.
 
ಅತೀ ಕಡಿಮೆ ದರದ ಫ್ರೀಡಂ 251 ಸ್ಮಾರ್ಟ್‌ಪೋನ್‌ಗಳನ್ನು ಜೂನ್ 30 ಕ್ಕೆ ಗ್ರಾಹಕರಿಗೆ ವಿತರಿಸಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿತ್ತು. 
 
ಈಗಾಗಲೇ ಸಂಸ್ಥೆ 2 ಲಕ್ಷ ಸ್ಮಾರ್ಟ್‌ಪೋನ್‌ಗಳನ್ನು ಉತ್ಪಾದಿಸಿದೆ ಎಂದು ರಿಂಗಿಂಗ್ ಬೆಲ್ಸ್ ಸಂಸ್ಥೆಯ ಸಂಸ್ಥಾಪಕ ಮೋಹಿತ್ ಗೋಯಲ್ ಮಾಹಿತಿ ನೀಡಿದ್ದಾರೆ.
 
ರಿಂಗಿಂಗ್ ಬೆಲ್ಸ್ ಸಂಸ್ಥೆ ಸಿದ್ದಪಡಿಸಿರುವ ಫ್ರೀಡಂ-251 ಸ್ಮಾರ್ಟ್‌ಪೋನ್‌ಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಪರಿಗಣಿಸುವಂತೆ ಪ್ರಧಾನಿ ಮೋದಿಯವರಲ್ಲಿ ಪತ್ರದ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದು ಗೋಯಲ್ ತಿಳಿಸಿದ್ದಾರೆ.
 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈ 7 ರಂದು ಪೋನ್ ಬಿಡುಗಡೆ ಸಮಾರಂಭವನ್ನು ಆಯೋಜಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಸಂಸ್ಥೆ ಈಗಾಗಲೇ 2 ಲಕ್ಷ ಫ್ರೀಡಂ 251 ಸ್ಮಾರ್ಟ್‌ಪೋನ್‌ಗಳನ್ನು ಸಿದ್ಧಪಡಿಸಿದೆ. ಜೂನ್ 30 ರಿಂದ ಗ್ರಾಹಕರಿಗೆ ವಿತರಿಸುವ ಕಾರ್ಯ ಆರಂಭವಾಗಲಿದೆ. ಮೊದಲು ನೋಂದಣಿ ಮಾಡಿಕೊಂಡಿರುವ 2 ಲಕ್ಷ ಗ್ರಾಹಕರಿಗೆ ಸ್ಮಾರ್ಟ್‌ಪೋನ್‌ಗಳನ್ನು ವಿತರಿಸಿ, ನಂತರ ಮತ್ತೆ ಬುಕ್ಕಿಂಗ್ ಪ್ರಾರಂಭ ಮಾಡುತ್ತೇವೆಂದು ಮೋಹಿತ್ ಗೋಯಲ್ ತಿಳಿಸಿದ್ದಾರೆ.
 
ನಮ್ಮ ತಪ್ಪುಗಳಿಂದ ಪಾಠ ಕಲಿತಿದ್ದೇವೆ.ಆದ್ದರಿಂದ, ನಮ್ಮ ಉತ್ಪಾದನೆ ಮಾರುಕಟ್ಟೆಗೆ ಬರುವವರೆಗೆ  ಮೌನವಾಗಿರಲು ನಿರ್ಧರಿಸಿದ್ದೇವೆ. ಇದೀಗ ನಮ್ಮ ಬಳಿ 4-ಇಂಚ್, ಡ್ಯೂಯೆಲ್ ಸಿಮ್ ಫೋನ್ ಗ್ರಾಹಕರಿಗೆ ವಿತರಿಸಲು ಸಿದ್ದವಾಗಿದೆ. ನಾವು ಗ್ರಾಹಕರಿಗೆ ನೀಡಿದ ಭರವಸೆಯನ್ನು ಈಡೇರಿಸಿದ ಸಂತಸವಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ