ಗಗನಕ್ಕೇರಿದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಅಲ್ಪ ಕುಸಿತ

ಸೋಮವಾರ, 2 ಮೇ 2016 (17:55 IST)
ಕಳೆದ ಎರಡು ವರ್ಷದ ಅವಧಿಯಲ್ಲಿ ಸತತ ನಾಲ್ಕು ದಿನಗಳಿಂದ ಉತ್ತುಂಗಕ್ಕೇರಿದ್ದ ಚಿನ್ನ, ಸಾಗರೋತ್ತರ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಪರಿಣಾಮ ಇಂದು ಚಿನಿವಾರ ಪೇಟೆಯಲ್ಲಿ ಚಿನ್ನ 100 ರೂಪಾಯಿ ಕಡಿಮೆಯಾಗಿ ಪ್ರತಿ 10 ಗ್ರಾಂ.ಗೆ 30,200 ರೂಪಾಯಿ ತಲುಪಿದೆ. 
ಕೈಗಾರಿಕೆ ಘಟಕಗಳು ಮತ್ತು ನಾಣ್ಯ ತಯಾರಕರ ಸಂಸ್ಥೆಗಳ ಬೇಡಿಕೆ ಕುಗ್ಗಿದರ ಪರಿಣಾಮವಾಗಿ ಬೆಳ್ಳಿ 150 ರೂ. ಕುಸಿತ ಕಂಡು ಪ್ರತಿ ಕೆಜಿಗೆ 41,700 ರೂ. ತಲುಪಿದೆ.
 
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯಲ್ಲಿ ಕುಸಿಕ ಕಂಡು ಬಂದ ಹಿನ್ನೆಲೆಯಲ್ಲಿ ಚಿನ್ನದ ದರ ಕಡಿತಗೊಂಡಿದೆ ಎಂದು ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.
 
ಜಾಗತಿಕವಾಗಿ, ಸಿಂಗಾಪೂರ್ ಮಾರುಕಟ್ಟೆಯಲ್ಲಿ ಪ್ರತಿ  ಔನ್ಸ್ ಚಿನ್ನದ ದರದಲ್ಲಿ 0.2 ಶೇ. ಏರಿಕೆ ಕಂಡು 1,296.12 ಡಾಲರ್‌‌ ಮೊತ್ತಕ್ಕೆ ತಲುಪಿದೆ.
 
ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ 100 ರೂಪಾಯಿ ಕುಸಿತ ಕಂಡು, 99.9 ಪ್ರತಿಶತ ಶುದ್ದ ಚಿನ್ನದ ದರ 30,200 ರೂಪಾಯಿ ಮತ್ತು 99.5 ಪ್ರತಿಶತ ಶುದ್ದ ಚಿನ್ನದ ದರ 30,050 ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
 
100 ಬೆಳ್ಳಿ ನಾಣ್ಯಗಳ ಖರೀದಿ ದರ 70,000 ರೂಪಾಯಿಗಳಾಗಿದ್ದು, ಮಾರಾಟ ದರ 71,000 ರೂಪಾಯಿಗಳಾಗಿವೆ ಎಂದು ಚಿನಾವರಪೇಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ