ಮಾರುಕಟ್ಟೆ ಪೈಪೋಟಿ: ಏರ್‌ಟೆಲ್ 3ಜಿ ಹಾಗೂ 4ಜಿ ಸೇವೆಯಲ್ಲಿ ಬಾರಿ ರಿಯಾಯಿತಿ

ಮಂಗಳವಾರ, 30 ಆಗಸ್ಟ್ 2016 (10:36 IST)
ರಿಲಯನ್ಸ್ ಜಿಯೋ ಅತೀ ಕಡಿಮೆ ಬೆಲೆಯಲ್ಲಿ 4ಜಿ ಸೇವೆ ನೀಡಲು ಮುಂದಾಗುತ್ತಿದ್ದಂತೆಯೇ ಅದಕ್ಕೆ ತೀವ್ರ ಪೈಪೋಟಿ ನೀಡಲು ಭಾರತೀಯ ಏರ್‌ಟೆಲ್ ಸಿದ್ಧತೆ ನಡೆಸಿದೆ. 
 
ಭಾರತೀಯ ಏರ್‌ಟೆಲ್ ವಿಶೇಷ ಯೋಜನೆ ಅಡಿಯಲ್ಲಿ 51 ರೂಪಾಯಿಗಳಲ್ಲಿ 1 ಜಿಬಿ ಡೇಟಾ ಸೇವೆ ನೀಡುವ ಮೂಲಕ ತನ್ನ 4ಜಿ ಹಾಗೂ 3ಜಿ ಸೇವೆಗಳ ದರದಲ್ಲಿ 80 ಪ್ರತಿಶತ ಕಡಿತಗೊಳಿಸಲು ನಿರ್ಧರಿಸಿದೆ. 
 
ರಿಲಯನ್ಸ್ ಸಂಸ್ಥೆಯ ಜಿಯೋ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಅದು ತೀರ ಕಡಿಮೆ ದರದಲ್ಲಿ 4ಜಿ ಸೇವೆ ನೀಡುವುದಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಯೋ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 
 
ರಿಲಯನ್ಸ್ ಜಿಯೋಗೆ ತೀವ್ರ ಪೈಪೋಟಿ ನೀಡುವ ನಿಟ್ಟಿನಲ್ಲಿ ಭಾರತೀಯ ಏರ್‌ಟೆಲ್ 3ಜಿ ಹಾಗೂ 4ಜಿ ಸೇವೆಗಳ ದರದಲ್ಲಿ ಕಡಿತಗೊಳಿಸಲು ಮುಂದಾಗಿದೆ. ಕೇವಲ 51 ರೂಪಾಯಿ ದರದಲ್ಲಿ 1 ಜಿಬಿ ಡೇಟಾ ಸೇವೆ ನೀಡಲು ಏರ್‌ಟೆಲ್ ಘೋಷಿಸಿದೆ. ಅದರಂತೆ, 1498 ರೂಪಾಯಿಗಳ ದರದಲ್ಲಿ 28 ದಿನಗಳ ಕಾಲಾವಧಿಗೆ 4ಜಿ ಸೇವೆ ನೀಡಲು ನಿರ್ಧರಿಸಿದೆ. ಈ 1 ಜಿಬಿ ಡೇಟಾ ಮುಕ್ತಾಯವಾದ ಮೇಲೆ ಮುಂದಿನ ಪ್ರತಿ 1ಜಿಬಿ ಡೇಟಾಗೆ 51 ರೂಪಾಯಿ ದರ ವಿಧಿಸಲು ನಿರ್ಧರಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ