ಮೋದಿ ಸರ್ಕಾರಕ್ಕೆ ಸಂತಸದ ಸುದ್ದಿ: ಜಾಗತಿಕ ಸ್ಪರ್ಧಾತ್ಮಕ ಶ್ರೇಯಾಂಕದಲ್ಲಿ 16 ಸ್ಥಾನ ಬಡ್ತಿ ಪಡೆದ ಭಾರತ

ಬುಧವಾರ, 28 ಸೆಪ್ಟಂಬರ್ 2016 (17:18 IST)
ವಿಶ್ವ ಆರ್ಥಿಕ ವೇದಿಕೆ ಸಿದ್ದಪಡಿಸಿರುವ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ ಪಟ್ಟಿಯಲ್ಲಿ ಭಾರತ 16 ಸ್ಥಾನಗಳ ಬಡ್ತಿ ಪಡೆದಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರಕ್ಕೆ ಸಂತಸದ ಸಂಗತಿಯಾಗಿದೆ.
 
ಉತ್ತಮ ಮಾರುಕಟ್ಟೆ ಸಾಮರ್ಥ್ಯ ಮತ್ತು ವಹಿವಾಟು ವ್ಯವಸ್ಥೆಯಲ್ಲಿನ ಬದಲಾವಣೆಗಳಿಂದಾಗಿ ಭಾರತದ ಶ್ರೇಯಾಂಕದಲ್ಲಿ ಚೇತರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
 
ಅತಿ ಹೆಚ್ಚು ಆರ್ಥಿಕ ಸ್ಪರ್ಧಾತ್ಮಕತೆ ಪಟ್ಟಿಯಲ್ಲಿ ಸ್ವಿಟ್ಜರ್‌ಲೆಂಡ್ ಅಗ್ರಸ್ಥಾನ ಪಡೆದಿದೆ. ಸಿಂಗಾಪೂರ್ ಮತ್ತು ಅಮೆರಿಕ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ.
 
ಕಳೆದ ವರ್ಷ 55ನೇ ಸ್ಥಾನದಲ್ಲಿದ್ದ ಭಾರತ 16 ಸ್ಥಾನಗಳ ಬಡ್ತಿ ಪಡೆದು 39 ನೇ ಸ್ಥಾನಕ್ಕೆ ತಲುಪಿದೆ. ವಿಶ್ವ ಆರ್ಥಿಕ ವೇದಿಕೆ ಪಟ್ಟಿಯಲ್ಲಿ ಭಾರತ ಶೇ.4.52 ರಷ್ಟು ಚೇತರಿಕೆ ಕಂಡಿದ್ದರೆ, ಸ್ವಿಟ್ಜರ್‌ಲೆಂಡ್ ಶೇ.5.81 ರಷ್ಟು ಏರಿಕೆ ಕಂಡಿದೆ.
 
ನೆದರ್‌ಲೆಂಡ್, ಜರ್ಮನಿ, ಸ್ವಿಡನ್, ಯುಕೆ, ಜಪಾನ್, ಹಾಂಗ್‌ಕಾಂಗ್, ಫಿನ್‌ಲೆಂಡ್ ದೇಶಗಳು ಕ್ರಮವಾಗಿ 4,5, 6, 7, 8, 9, 10 ಸ್ಥಾನ ಪಡೆದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ