ಮಾರುತಿ ಸುಜುಕಿಯಿಂದ ಹೆಚ್ಚುವರಿ ಮಾಡೆಲ್ಗಳಲ್ಲಿ ಗೇರ್ ಶಿಫ್ಟ್ ಟೆಕ್ನಾಲಜಿ
ಸೋಮವಾರ, 9 ಮೇ 2016 (14:32 IST)
ಆಟೋ ಗೇರ್ ಶಿಫ್ಟ್ ತಂತ್ರಜ್ಞಾನ ಹೊಂದಿರುವ 1 ದಶಲಕ್ಷ ವಾಹನಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ ಇಂಡಿಯಾ, ಇದೀಗ ಅದೆ ಮಾದರಿಯಲ್ಲಿ ಇತರೆ ವಾಹನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ.
ಟು-ಪೆಡಲ್ ಟೆಕ್ನಾಲಜೀಸ್ ಜನಪ್ರಿಯತೆಯಿಂದ ಮಾರುಕಟ್ಟೆಯಲ್ಲಿ ಈ ಮಾದರಿಯ ವಾಹನಗಳನ್ನು ವಿಸ್ತರಿಸಲು ಸಂಸ್ಥೆ ಯೋಜನೆ ರೂಪಿಸುತ್ತಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ (ಆರ್ & ಡಿ) ಸಿ ವಿ ರಾಮನ್ ತಿಳಿಸಿದ್ದಾರೆ.
2014 ರ ಫೆಬ್ರುವರಿಯಲ್ಲಿ ಮಾರುತಿ ಸುಜುಕಿ ದೇಶದಲ್ಲಿ ಪ್ರಪ್ರಥಮ ಬಾರಿಗೆ ಸೆಲೆರಿಯೋ ಆವೃತ್ತಿಯ ವಾಹನಗಳಲ್ಲಿ ಎಜಿಎಸ್ ವೈಶಿಷ್ಟ್ಯವನ್ನು ಪರಿಚಯುಸಿತ್ತು. ಸಂಸ್ಥೆಯ ಒಟ್ಟು ಮಾರಾಟದಲ್ಲಿ ಸೆಲೆರಿಯೋ ಆವೃತ್ತಿಯ ವಾಹನಗಳು 60 ಪ್ರತಿಶತ ಪಾಲನ್ನು ಹೊಂದಿದೆ.