ಗೂಗಲ್ ಪಿಕ್ಸೆಲ್ ಮೇಲೆ ಭಾರಿ ರಿಯಾಯಿತಿ!

ಬುಧವಾರ, 8 ಫೆಬ್ರವರಿ 2017 (11:23 IST)
ಆಪೆಲ್, ಸ್ಯಾಮ್‍ಸಂಗ್‌ ಕಂಪೆನಿಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಬಂದ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‍ಕಾರ್ಟ್ ಭಾರಿ ರಿಯಾಯಿತಿ ಘೋಷಿಸಿದೆ. ಸುಮಾರು ರೂ.26 ಸಾವಿರದಷ್ಟು ದರ ಕಡಿಮೆ ಮಾಡಿದೆ. 32 ಜಿಗಿ ವೇರಿಯಂಟ್ ಬೆಲೆ ರೂ.57 ಸಾವಿರ ಇದ್ದು, ರಿಯಾಯಿತಿ ಮೂಲಕ ರೂ.28 ಸಾವಿರಕ್ಕೇ ಫೋನ್ ಸಿಗಲಿದೆ ಎಂದು ಫ್ಲಿಪ್‍ಕಾರ್ಟ್ ತಿಳಿಸಿದೆ.
 
ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಎಕ್ಸೇಂಜ್ ಆಫರ್ ಮೂಲಕ ಫೋನ್ ಕೊಂಡುಕೊಳ್ಳುವವರಿಗೆ ಈ ಆಫರ್ ಅನ್ವಯಿಸಲಿದೆ. ಕ್ರೆಡಿಟ್ ಕಾರ್ಡ್ ಮೂಲಕ ಇಎಂಐಯನ್ನು ನೇರವಾಗಿ ಸಲ್ಲಿಸುವವರಿಗೆ ರೂ.9 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಸಹ ಇದೆ. ಮೊಬೈಲ್ ಕೊಂಡುಕೊಂಡ 90 ದಿನಗಳಲ್ಲಿ ಈ ಕ್ಯಾಶ್‍ಬ್ಯಾಕ್ ಖಾತೆಗೆ ಜಮೆ ಆಗಲಿದೆ.
 
ಒಂದು ಕಾರ್ಡ್‌ನ್ನು ಒಮ್ಮೆ ಮಾತ್ರ ಬಳಸಿ ಕೊಂಡುಕೊಳ್ಳಲು ಸಾಧ್ಯ. ಇನ್ನು ಎಕ್ಸೇಂಜ್ ಮೂಲಕ ಕೊಳ್ಳುವವರಿಗೆ ಫೋನ್ ಆಧಾರದ ಮೇಲೆ ರೂ.20 ಸಾವಿರವರೆಗೂ ರಿಯಾಯಿತಿ ಸಿಗಲಿದೆ. ಒಟ್ಟು ರೂ.29 ಸಾವಿರ ಎನ್ನಬಹುದು. ಇದೇ ಆಫಾರ್ 128 ಜಿಬಿ ವೇರಿಯಂಟ್ ಫೋನ್‌ಗೂ ಅನ್ವಯಿಸಲಿದೆ. ಈ ಮಾಡೆಲ್ ಬೆಲೆ ರೂ.66 ಸಾವಿರ ಇದ್ದು, ರಿಯಾಯಿತಿ ಕಳೆದು ರೂ.37 ಸಾವಿರಕ್ಕೆ ಲಭ್ಯವಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ