ಜಿಎಸ್‌ಟಿ ತೆರಿಗೆ ಪ್ರಕಟ: ಆಹಾರ ಧಾನ್ಯಗಳಿಗೆ ತೆರಿಗೆ ವಿನಾಯಿತಿ

ಗುರುವಾರ, 3 ನವೆಂಬರ್ 2016 (18:25 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಏಪ್ರಿಲ್ 1 2017ರಿಂದ ಜಾರಿಗೆ ತರಲು ನಿರ್ಧರಿಸಿದೆ. 
 
ಜಿಎಸ್‌ಟಿ ತೆರಿಗೆಯನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗುತ್ತಿದ್ದು ಕನಿಷ್ಠ ಶೇ,5 ರಿಂದ ಶೇ.28 ರಷ್ಟು ತೆರಿಗೆಯನ್ನು ವಿಧಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 
 
ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲಿ ಕನಿಷ್ಠ ತೆರಿಗೆ ದರ ಉದ್ದೇಶಿಸಿತ ಶೇ,6ರಷ್ಟು ಬದಲು 5ರಷ್ಟು ಹಾಗೂ ಗರಿಷ್ಠ ಉದ್ದೇಶಿತ ತೆರಿಗೆ ಶೇ.26ರ ಬದಲು 28ರಷ್ಟು ತೆರಿಗೆ ವಿಧಿಸಲು ಒಪ್ಪಿಗೆ ಸೂಚಿಸಲಾಗಿದೆ.
 
ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿಯವರ ನೇತೃತ್ವದಲ್ಲಿ ನಡೆದ ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲಿ ಹಿಂದೆ ನಿಗದಿಪಡಿಸಲಾಗಿದ್ದು ಕನಿಷ್ಠ ಶೇ.6ರ ಬದಲಿಗೆ ಶೇ.6 ರಷ್ಟು ಮತ್ತು ಗರಿಷ್ಠ ಶೇ.26 ರ ಬದಲಿಗೆ ಶೇ.28 ರಷ್ಟು ತೆರಿಗೆ ಹೆಚ್ಚಿಸಲು ಸಮ್ಮತಿ ಸೂಚಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.   
 
ವಿವಿಧ ವಸ್ತುಗಳ ಮೇಲೆ ಶೇ.5, ಶೇ.12, ಶೇ.18 ಮತ್ತು ಶೇ.28 ರಷ್ಟು ನಾಲ್ಕು ಹಂತದ ತೆರಿಗೆ ವಿಧಿಸಲಾಗುವುದು ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ