ವಿಳಂಬ ತಪ್ಪಿಸುವ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಪಡಿತರ ಚೀಟಿ ವಿತರಿಸುವ ಸೌಲಭ್ಯ ಒದಗಿಸಲಾಗುತ್ತಿದೆ. ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಹಣ ಕೊಡಬೇಡಿ. ಆಹಾರ ಧಾನ್ಯಗಳನ್ನೇ ಕೊಡಿ ಎಂದು ಆಹಾರ ಸಚಿವರಿಗೆ ಸೂಚಿಸಿದ್ದೇನೆ ಎಂದು ನುಡಿದ ಮುಖ್ಯಮಂತ್ರಿಗಳು ಅದನ್ನೇ ಮುಂದುವರಿಸಲಾಗುವುದು ಎಂದರು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ 15 ದಿನದಲ್ಲಿ ಪಡಿತರ ಚೀಟಿ ಸಿಗಲಿದೆ. ವ್ಯವಸ್ಥೆ ಸರಳೀಕರಣ ಆಗಲಿ. ಆದರೆ ಅದರಿಂದ ಫಲಾನುಭವಿಗಳಿಗೆ ತೊಂದರೆ ಆಗಬಾರದು. ಎಲ್ಲ ಅರ್ಹರಿಗೂ ಪಡಿತರ ಚೀಟಿ ಸಿಗಬೇಕು, ಯೂನಿಟ್ ಗೆ 5 ಕೆ.ಜಿ. ಪ್ರಕಾರ ಈಗ ಅಕ್ಕಿ ನೀಡಲಾಗುತ್ತಿದೆ. ಏಪ್ರಿಲ್ ಒದರಿಂದ ಅದನ್ನು ಹೆಚ್ಚಿಸಲಾಗುವುದು.ಎಂದು ಮುಖ್ಯಮಂತ್ರಿಗಳು ನುಡಿದರು.