ಹೌದು. ವಾಟ್ಸ್ ಆ್ಯಪ್ ನಲ್ಲಿ ಬಂದ ಮಾಹಿತಿ ಸುಳ್ಳು ಅಥವಾ ಸತ್ಯವೇ ಎಂಬುದನ್ನು ತಿಳಿಯಲು ವಾಟ್ಸ್ಆ್ಯಪ್ ಸಂಸ್ಥೆ ‘ಫಾರ್ವಡ್ ಮೆಸೇಜ್‘ ಎಂಬ ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ. ಇದರಲ್ಲಿ ಬಳಕೆದಾರರಿಗೆ ‘ಫಾರ್ವಟೆಡ್ ಇನ್ಫೋ‘ ಮತ್ತು ‘ಫ್ರೀಕ್ವೆಂಟ್ಲಿ ಫಾರ್ವಡೆಡ್‘ ಎಂಬ ಎರಡು ರೀತಿಯ ಹೊಸ ಆಯ್ಕೆಯನ್ನು ನೀಡುತ್ತಿದೆ.
ಈ ಫೀಚರ್ನಲ್ಲಿ ನಾವು ಕಳುಹಿಸಲಾದ ಸಂದೇಶ ಎಷ್ಟು ಬಾರಿ ಫಾರ್ವಡ್ ಆಗಿದೆ ಎಂಬ ಮಾಹಿತಿ ನಮಗೆ ತಿಳಿಯುವುದಿಲ್ಲ. ಆದರೆ ನಾವು ಫಾರ್ವಡ್ ಮಾಡಿದ ಸ್ನೇಹಿತರಿಗೆ ಈ ಮಾಹಿತಿ ತಿಳಿಯುತ್ತದೆ. ಇದನ್ನು ಫಾರ್ವಟೆಡ್ ಇನ್ಫೋ‘ ದಿಂದ ತಿಳಿಯಬಹುದು.
ವಾಟ್ಸ್ ಆ್ಯಪ್ ಬಳಕೆದಾರ ಕಳುಹಿಸಿದ ಸಂದೇಶ ನಾಲ್ಕಕ್ಕಿಂತ ಹೆಚ್ಚು ಬಾರಿ ಫಾರ್ವಡ್ ಆದಲ್ಲಿ, ಫ್ರೀಕ್ವೆಂಟ್ಲಿ ಫಾರ್ವಡೆಡ್ ಎಂಬ ಲೇಬಲ್ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಜನಪ್ರಿಯ ಸಂದೇಶ ಯಾವುದೆಂದು ತಿಳಿಯಲು ಸಹಾಯಕವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.