ಐಡಿಯಾ-ವೊಡಾಫೋನ್ ವಿಲೀನಕ್ಕೆ ಚರ್ಚೆ

ಮಂಗಳವಾರ, 31 ಜನವರಿ 2017 (11:52 IST)
ಭಾರತ ದೂರಸಂಪರ್ಕ ದಿಗ್ಗಜ ಐಡಿಯಾದೊಂದಿಗೆ ವಿಲೀನಕ್ಕೆ ಚರ್ಚೆ ನಡೆಯುತ್ತಿದೆ ಎಂದು ವೊಡಾಫೋನ್ ಸೋಮವಾರ ತಿಳಿಸಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆಯನ್ನು ವಿಲೀನದಿಂದ ತಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಕಂಪೆನಿ ಅಭಿಪ್ರಾಯಪಟ್ಟಿದೆ.
 
ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಈ ಬಗ್ಗೆ ವೊಡಾಫೋನ್ ಪ್ರಕಟಿಸಿಕೊಂಡಿದೆ. ಐಡಿಯಾ ಮಾತೃಸಂಸ್ಥೆಯಾಗಿರುವ ಆದಿತ್ಯಬಿರ್ಲಾ ಗ್ರೂಪ್ ಜತೆಗೆ ಚರ್ಚೆ ನಡೆಸುತ್ತಿದ್ದೇವೆಂದಿದೆ. ವೊಡಾಫೋನ್ - ಐಡಿಯಾ ವಿಲೀನವಾದರೆ, ಗ್ರಾಹಕರ ಸಂಖ್ಯೆ 39 ಕೋಟಿಯಾಗಲಿದೆ. ಈಗಾಗಲೇ ಏರ್‍‍ಟೆಲ್ ಕಂಪನಿಗೆ 27 ಕೋಟಿ ಗ್ರಾಹಕರಿದ್ದು, ಐಡಿಯಾ ವೊಡಾಫೋನ್ ಜತೆಯಾದರೆ ಏರ್‍‍ಟೆಲ್ ಕಂಪನಿಯನ್ನು ಹಿಂದಿಕ್ಕಬಹುದಾಗಿದೆ.
 
ಕಳೆದ ಆರು ತಿಂಗಳಿನಿಂದ ಉಚಿತ ಸೌಲಭ್ಯಗಳನ್ನು ಒದಗಿಸಿ ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ರಿಲಾಯನ್ಸ್ ಜಿಯೊಗೆ ಐಡಿಯಾ-ವೊಡಾಫೋನ್ ಮೈತ್ರಿ ಹೊಡೆತ ನೀಡಲಿದೆ. ಪ್ರಸ್ತುತ ಜಿಯೋಗೆ  7.2 ಕೋಟಿ ಗ್ರಾಹಕರಿದ್ದು, ದೇಶದಲ್ಲಿ ಅತೀ ಹೆಚ್ಚು ಗ್ರಾಹಕರಿರುವ ಏರ್‍‍ಟೆಲ್ ಕಂಪನಿಗೆ ಷೇರು ಮಾರುಕಟ್ಟೆಯಲ್ಲಿ ಶೇ.24 ಷೇರುಗಳಿವೆ.
 
ಶೇ.19 ಷೇರು ಹೊಂದಿರುವ ವೊಡಾಫೋನ್ ಮತ್ತು ಶೇ.17 ಷೇರು ಹೊಂದಿರುವ ಐಡಿಯಾ ವಿಲೀನವಾದರೆ, ಈ ಕಂಪನಿ ದೇಶದ ಅತೀ ದೊಡ್ಡ ಟೆಲಿಕಾಂ ಶಕ್ತಿಯಾಗಿ ಹೊರಹೊಮ್ಮಲಿದೆ. ಒಂದು ಕಡೆ ಜಿಯೋಗೆ ಮತ್ತೊಂದು ಕಡೆ ಏರ್ ಟೆಲ್ ಕಂಪೆನಿಗೂ ಇದರಿಂದ ಹೊಡೆತ ಬೀಳಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ