ಅಧಿಕ ಮೌಲ್ಯದ ನೋಟು ರದ್ಧಾದ ಬಳಿಕ ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲು ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹೊರತಂದಿದೆ. ಇದರ ಭಾಗವಾಗಿ ಮೊಬೈಲ್ ಆಪ್ ಭೀಮ್ ಪ್ರಾರಂಭಿಸಿತು. ಆದರೆ ಇದುವರೆಗೆ ಇದು ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರ ಸೀಮಿತವಾಗಿತ್ತು.
ಇದೀಗ ಐಓಎಸ್‌ನಲ್ಲೂ ಲಭಿಸಲಿದೆ. ಮೊಬೈಲ್ ಆಪ್ ಭೀಮ್ ಈಗ ಆಪೆಲ್ ಫೋನ್ ಬಳಕೆದಾರರಿಗೂ ಸಹ ಲಭ್ಯವಾಗಲಿವೆ, ಆಪೆಲ್ ಸ್ಟೋರ್‌ನಲ್ಲಿ ಭೀಮ್ ಆಪ್ ಲಭ್ಯ. ಅದನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದೆಂದು ನೀತಿ ಆಯೋಗ ಟ್ವಿಟ್ಟರ್ ಮೂಲಕ ತಿಳಿಸಿದೆ.
ಬಳಕೆದಾರರಿಗೆ ಸುಲಭವಾಗಿ, ಸುರಕ್ಷಿತವಾಗಿ ನಗದನ್ನು ವರ್ಗಾಯಿಸಲು ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಈ ಆಪ್ ಪ್ರಾರಂಭಿಸಿದ್ದರು. ಇದುವರೆಗೆ ಈ ಆಪನ್ನು ಬಹಳಷ್ಟು ಸಂಖ್ಯೆಯಲ್ಲಿ ಡೌನ್‌ಲೋಡ್ ಮಾಡಿಕೊಂಡು ವಹಿವಾಟು ನಡೆಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.