ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಕೋಡಾಕ್ ಮೊಬೈಲ್

ಮಂಗಳವಾರ, 6 ಡಿಸೆಂಬರ್ 2016 (10:48 IST)
ಸಾಮಾನ್ಯವಾಗಿ ಕೋಡಾಕ್ ಅಂದ್ರೆ ನಮಗೆ ಹೊಳೆಯುವುದು ಕ್ಯಾಮೆರಾ. ಆದರೆ ಇದೇ ಮೊದಲ ಬಾರಿಗೆ ಕೋಡಾಕ್ ಕಂಪನಿ ಮೊಬೈಲೊಂದನ್ನು ರಿಲೀಸ್ ಮಾಡುತ್ತಿದೆ. ಸ್ಮಾರ್ಟ್‌ಫೋನ್‌ಗಳು ಬಂದ ಮೇಲೆ ಕ್ಯಾಮೆರಾಗಳ ಬಳಕೆ ಕಡಿಮೆಯಾಗಿದೆ. ಫೋನ್‌ನಲ್ಲೇ ಉತ್ತಮ ಫೋಟೋಗಳು ತೆಗೆಯಲು ಸಾಧ್ಯವಾಗುತ್ತಿರುವ ಕಾರಣ ಬಳಕೆದಾರರು ಹೆಚ್ಚಾಗಿ ಸ್ಮಾರ್ಟ್‌ಫೋನ್‍ಗಳನ್ನೇ ಬಳಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. 
 
ಇದನ್ನು ಗುರಿಯಾಗಿಸಿಕೊಂಡು ಫೋಟೋಗ್ರಫಿ ಪ್ರಿಯರಿಗೆಂದೇ ಕೆಲವೊಂದು ಹೈ ಎಂಡ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಬಂದವು. ಇದೀಗ ಕೋಡಕ್ ಕಂಪನಿ ’ಏಕ್‌ತ್ರಾ’ ಹೆಸರಿನ ಮೊಬೈಲ್ ರಿಲೀಸ್ ಮಾಡುತ್ತಿದೆ. ಈ ಫೋನ್ ಮೂಲಕ ಡಿಎಸ್‌ಎಲ್‌ಆರ್ ಕ್ಯಾಮೆರಾ ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದು.
 
ಡಿಸೆಂಬರ್ 9ರಂದು ಜರ್ಮನಿ ಮಾರುಕಟ್ಟೆಗೆ ಈ ಮೊಬೈಲ್ ಬಿಡುಗಡೆಯಾಗುತ್ತಿದೆ. ಅಮೆಜಾನ್, ಕೋಡಕ್‌ಫೋನ್ಸ್.ಕಾಮ್ ವೆಬ್‌ಸೈಟ್‍ಗಳಲ್ಲಿ ಇದು ಲಭ್ಯವಿರುತ್ತದೆ. ಈ ಮಾಡೆಲ್ ಬೆಲೆ 499 ಯೂರೋಗಳು (ರೂ.36,000). ಏಕ್‌ತ್ರಾ ಫೋನ್‌ನಲ್ಲಿ ಪ್ರಮುಖ ಆಕರ್ಷಣೆ ಎಂದರೆ ಕ್ಯಾಮೆರಾ. 21 ಎಂಪಿ ಆಟೋಫೋಕಸ್ ಕ್ಯಾಮೆರಾ, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದು.
 
ಡಿಎಸ್‌ಎಲ್‌ಆರ್ ಕ್ಯಾಮೆರಾದಲ್ಲಿರುವ ಸ್ಮಾರ್ಟ್ ಆಟೋ, ಪನೋರಮಾ, ಮ್ಯಾಕ್ರೋ ನಂತಹ ಕೆಲವು ಆಯ್ಕೆಗಳನ್ನು ಉಪಯೋಗಿಸಿ ಸಂದರ್ಭಕ್ಕೆ ತಕ್ಕಂತೆ ಕ್ಯಾಮೆರಾ ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಬಹುದು. 4ಕೆ ವಿಡಿಯೋ ರೆಸುಲ್ಯೂಷನ್ ಸಹ ಚಿತ್ರೀಕರಿಸಿಕೊಳ್ಳುವ ಸೌಲಭ್ಯ ಇದೆ. 13 ಎಂಪಿ ಫ್ರಂಟ್ ಕ್ಯಾಮೆರಾ ಮೂಲಕ ಸೆಲ್ಫಿಗಳು, ವಿಡಿಯೋ ಚಾಟಿಂಗ್ ಇನ್ನಷ್ಟು ಗುಣಮಟ್ಟದಿಂದ ಇರುತ್ತೆ. 
 
ಫೋನ್ ವಿಶೇಷಗಳು:
* 5 ಇಂಚು ಫುಲ್ ಎಚ್‍ಡಿ ಡಿಸ್ಪ್ಲೆ
* 3 ಜಿಬಿ ರಾಮ್, 2.3 ಹೆಲಿಯೋ ಎಕ್ಸ್ 20 ಡೆಕಾ ಕೋರ್ ಪ್ರಾಸೆಸರ್
* 32 ಜಿಬಿ ಇಂಟರ್‌ನಲ್ ಮೆಮೊರಿ 
* 3000 ಎಂಎಎಚ್ ಬ್ಯಾಟರಿ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ