ಹದಿಹರಿಯದವರಿಗೊಂದು ಲೈಫ್ ಸ್ಟೇಜ್ ಆ್ಯಪ್

ಬುಧವಾರ, 2 ನವೆಂಬರ್ 2016 (12:32 IST)
ನವದೆಹಲಿ: ಕಂಪ್ಯೂಟರ್ ಮೂಲಕವಷ್ಟೇ ಆಪರೇಟ್ ಮಾಡಬಹುದಾದ ಫೇಸ್ಬುಕ್ ಸಂಸ್ಥೆಯ ಲೈಫ್ ಸ್ಟೇಜ್ ಪ್ರೊಗ್ರಾಮ್ ಇನ್ಮುಂದೆ ಅಂಡ್ರಾಯ್ಡ್ ಫೋನ್ ಗಳಲ್ಲಿ ಆ್ಯಪ್‌ನಲ್ಲಿ ಲಭ್ಯವಾಗಲಿದೆ.
ಫೇಸ್ಬುಕ್ ಸಂಸ್ಥೆಯು ಹದಿಹರೆಯದವರನ್ನ ಗಮನದಲ್ಲಿಟ್ಟುಕೊಂಡು ಈ  ಲೈಫ್ ಸ್ಟೇಜ್ ಪ್ರೊಗ್ರಾಮ್ ತಯಾರಿಸಿತ್ತು. ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಅದನ್ನು ಆ್ಯಪ್‌ನಲ್ಲೂ ಗ್ರಾಹಕರಿಗೆ ನೀಡಿದರೆ ಹೇಗೆ ಎಂದು ಚಿಂತಿಸಿ, ಎರಡು ತಿಂಗಳ ಹಿಂದೆ ಐಫೋನ್ ಗೆ ಈ ಆ್ಯಪನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದರಿಂದ ಆ್ಯಂಡ್ರಾಯ್ಡ್ ವರ್ಷನ್ ನ ಲೈಫ್ ಸ್ಟೇಜ್ ಆ್ಯಪ್ ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಲಾಗಿದೆ.ಈಗಾಗಲೇ ಖ್ಯಾತವಾಗುತ್ತಿರುವ ಸ್ನ್ಯಾಪ್ ಚಾಟ್ ಆ್ಯಪ್ ಗೆ ಪ್ರತಿಯಾಗಿ ಫೇಸ್ಬುಕ್ ಈ ಹೊಸ ಆ್ಯಪನ್ನು ಅಣಿಗೊಳಿಸಿದೆ.
 
21 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು ಮಾತ್ರ ಈ ಆ್ಯಪ್ ಬಳಸಬಹುದಾಗಿದೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆಂದೇ ತಯಾರಿಸಲಾದ ಆ್ಯಪ್ ಇದಾಗಿದ್ದು, ವಿದ್ಯಾರ್ಥಿಯ ವಿಡಿಯೋ ಡೈರಿಯಂತೆ ಕಾರ್ಯನಿರ್ವಹಿಸುತ್ತದೆ. ನೆಚ್ಚಿನ ಹಾಡು, ಬೆಸ್ಟ್ ಫ್ರೆಂಡ್ ಇತ್ಯಾದಿ ಕೆಲ ಸೀಮಿತ ಪ್ರಶ್ನೆಗಳಿಗೆ ಉತ್ತರ ನೀಡಿ ವಿಡಿಯೋ ಪ್ರೊಫೈಲ್ ಕ್ರಿಯೇಟ್ ಮಾಡಬಹುದಾಗಿದೆ. ಅಂಡ್ರಾಯ್ಡ್ ಫೋನ್ ನಲ್ಲಿ ಇದು ಸುಲಭವಾಗಿ ಇನ್ ಸ್ಟಾಲ್ ಮಾಡಬಹುದಾಗಿದ್ದರಿಂದ, ವಿದ್ಯಾರ್ಥಿಗಳ ಯೂಸರ್ ಫ್ರೆಂಡ್ ಆಗಿ ಕಾರ್ಯನಿರ್ವಹಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ