ಅಮೆಜಾನ್‌ನಲ್ಲಿ ಮೊನ್ನೆ ರಾಷ್ಟ್ರಧ್ವಜ ಇಂದು ಗಣಪತಿ

ಶುಕ್ರವಾರ, 20 ಜನವರಿ 2017 (13:15 IST)
ಆನ್‌ಲೈನ್ ದಿಗ್ಗಜ ಅಮೆಜಾನ್ ಕಂಪೆನಿ ಯಾಕೋ ಭಾರತೀಯ ಗ್ರಾಹಕರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಕೆನಡಾ ಅಮೆಜಾನ್ ವೆಬ್‌ಸೈಟ್‌ನಲ್ಲಿ ಭಾರತೀಯ ರಾಷ್ಟ್ರಧ್ವಜ ವಿನ್ಯಾಸದ ಡೋರ್‌ಮ್ಯಾಟ್‌ಗಳನ್ನು ಮಾರಾಟಕ್ಕಿಟ್ಟು ವಿವಾದ ಮೈಮೇಲೆ ಎಳೆದುಕೊಂಡ ಬಳಿಕ ಮಹಾತ್ಮಾಗಾಂಧಿ ಚಿತ್ರವಿರುವ ಚಪ್ಪಲಿಯನ್ನು ಮಾರಾಟಕ್ಕಿಟ್ಟು ಛೀಮಾರಿ ಹಾಕಿಸಿಕೊಂಡಿದ್ದು ಗೊತ್ತೇ ಇದೆ. 
 
ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮಧ್ಯ ಪ್ರವೇಶಿಸಿದ ಬಳಿಕ ಅಮೆಜಾನ್ ಕ್ಷಮಾಪಣೆ ಕೇಳಿತ್ತು. ಈಗ ಮತ್ತೆ ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ವಿಘ್ನೇಶ್ವರ ಚಿತ್ರವಿರುವ ಸ್ಕೇಟಿಂಗ್ ಬೋರ್ಡ್‍ಗಳನ್ನು ಮಾರಾಟಕ್ಕಿಟ್ಟಿದೆ. ಈ ಬಗ್ಗೆ ಚಂಡಿಗಢ ಮೂಲದ ನ್ಯಾಯವಾದಿ ಅಜಯ್ ಜಗ್ಗಾ ಅವರು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರಿಗೆ ಇ-ಮೇಲ್‍ ಮಾಡಿದ್ದಾರೆ.
 
ಕೂಡಲೆ ಆ ವಸ್ತುಗಳನ್ನು ವೆಬ್‌ಸೈಟ್‌ನಿಂದ ತೆಗೆದು ಕ್ಷಮೆಕೋರಬೇಕೆಂದು ಆಗ್ರಹಿಸಿದ್ದಾರೆ. ಅಮೆಜಾನ್ ಮೇಲೆ ಕೂಡಲೆ ಎಫ್‍ಐಆರ್ ದಾಖಲಿಸಬೇಕೆಂದು ಅವರು ಇ-ಮೇಲಲ್ಲಿ ಬೇಡಿಕೆ ಇಟ್ಟಿದ್ದಾರೆ. ಭಾರತೀಯ ಮನೋಭಾವನೆಗಳನ್ನು ಕೆರಳಿಸುವಂತೆ ಅಮೆಜಾನ್ ನಡೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ