ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಜೂನ್ ತಿಂಗಳ ಒಟ್ಟು ವಾಹನ ಮಾರಾಟದಲ್ಲಿ 5 ಪ್ರತಿಶತ ಹೆಚ್ಚಳವಾಗಿ 34,991 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 33,282 ಕಾರುಗಳು ಮಾರಾಟವಾಗಿದ್ದವು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ರಫ್ತು ವಹಿವಾಟಿನಲ್ಲಿ 41 ಪ್ರತಿಶತ ಹೆಚ್ಚಳವಾಗಿ 4,020 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೆ ಅವಧಿಯಲ್ಲಿ 2,852 ವಾಹನಗಳನ್ನು ಮಾರಾಟವಾಗಿದ್ದವು
ಸ್ಕಾರ್ಪಿಯೋ, ಎಕ್ಸ್ಯುವಿ-500, ಜೈಲೋ, ಬೊಲೇರೋ ಮತ್ತು ವೆರಿಟೋ ಸೇರಿದಂತೆ ಪ್ಯಾಸೆಂಜರ್ ವಿಭಾಗದ ಕಾರುಗಳ ಮಾರಾಟದಲ್ಲಿ 7 ಪ್ರತಿಶತ ಚೇತರಿಕೆ ಕಂಡು 17,070 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 15,880 ಕಾರುಗಳು ಮಾರಾಟವಾಗಿದ್ದವು.
ವಾಣಿಜ್ಯ ವಾಹನಗಳ ಮಾರಾಟದಲ್ಲಿ 6 ಪ್ರತಿಶತ ಹೆಚ್ಚಳವಾಗಿ 13,540 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 12,737 ವಾಹನಗಳು ಮಾರಾಟವಾಗಿದ್ದವು ಎಂದು ಮಹೀಂದ್ರಾ & ಮಹೀಂದ್ರಾ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.