ಬಡವರ ಮನೆ ನಿರ್ಮಾಣಕ್ಕೆ ಮುಂದಾದ ಮಲಬಾರ್

ಬುಧವಾರ, 1 ಮಾರ್ಚ್ 2017 (12:42 IST)
ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಸೂರು ಕಲ್ಪಿಸಬೇಕೆಂಬ ಕೇಂದ್ರ, ರಾಜ್ಯ ಸರಕಾರಗಳ ಯೋಜನೆಗಳ ಜತೆ ಕೈಜೋಡಿಸುವುದಾಗಿ ಆಭರಣ ಮಾರಾಟ ಕಂಪೆನಿ ಮಲಬಾರ್ ಗ್ರೂಪ್ ಘೋಷಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ಹಾಗೂ ರಾಜ್ಯ ಸರಕಾರದ ಯೋಜನೆಗಳಡಿ ಗೃಹ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಮಲಬಾರ್ ಗ್ರೂಪ್ ಮುಖ್ಯಸ್ಥ ಎಂ.ಪಿ ಅಹ್ಮದ್ ತಿಳಿಸಿದ್ದಾರೆ.
 
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್ಆರ್) ಕಂಪೆನಿ ತನ್ನ ಲಾಭದಲ್ಲಿ ಶೇ.5ರಷ್ಟು ಇದಕ್ಕಾಗಿ ಖರ್ಚು ಮಾಡಲಿದೆ. ಮಲಬಾರ್ ಹೌಸಿಂಗ್ ಚಾರಿಟಬಲ್ ಟ್ರಸ್ಟ್, ಮಲಬಾರ್ ಡೆವಲಪರ್ಸ್ ಸಹಾಯಹಸ್ತ ಚಾಚಲಿವೆ. ಯಾವುದೇ ಜಾತಿ, ಮತ, ಧರ್ಮಕ್ಕೆ ಅತೀತವಾಗಿ ಈ ಸಹಾಯ ಮಾಡುವುದಾಗಿ ಮಲಯಾಬ್ ಹೌಸಿಂಗ್ ಟ್ರಸ್ಟ್, ಮಲಬಾರ್ ಡೆವಲಪರ್ಸ್ ತಿಳಿಸಿದೆ.
 
600 ಚದರಡಿ ವಿಸ್ತೀರ್ಣದ ಮನೆ ನಿರ್ಮಿಸಿಕೊಳ್ಳಬೇಕೆನ್ನುವ ಬಡವರು ನಿವೇಶದ ಪತ್ರಗಳ ಪ್ರತಿ, ಮನೆ ಪ್ಲಾನ್ ಕಾಪಿ, ಫೋಟೋ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಸಮೀಪದ ಮಲಬಾರ್ ಗೋಲ್ಡ್, ಡೈಮಂಡ್ ಮಳಿಗೆ ಅಥವಾ ಮಲಬಾರ್ ಡೆವಲಪರ್ಸ್ ಕಾರ್ಯಾಲಯ ಅಥವಾ ಮಲಬಾರ್ ಹೌಸಿಂಗ್ ಚಾರಿಟಬಲ್ ಟ್ರಸ್ಟ್ ಕಾರ್ಯಾಲಯದಲ್ಲಿ ಮಾ.10ರೊಳಗೆ ಅರ್ಜಿ ಸಲ್ಲಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ