ಮಾರುತಿ ಸುಜುಕಿ ಮಾರಾಟದಲ್ಲಿ ಶೇ.13 ರಷ್ಟು ಹೆಚ್ಚಳ

ಸೋಮವಾರ, 2 ಮೇ 2016 (14:52 IST)
ಸ್ವದೇಶಿ ಕಾರು ತಯಾರಿಕಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ ತಿಂಗಳ ಮಾರಾಟದಲ್ಲಿ 13.3 ಪ್ರತಿಶತ ಹೆಚ್ಚಳ ಕಂಡು 1,26,569 ವಾಹನಗಳ ಮಾರಾಟದ ಗಡಿ ದಾಟಿದೆ ಎಂದು ವರದಿಗಳು ತಿಳಿಸಿವೆ.
ಮಾರುತಿ ಸುಜುಕಿ ಸಂಸ್ಥೆ, ಕಳೆದ ಆರ್ಥಿಕ ವರ್ಷದಲ್ಲಿ 1,11748 ವಾಹನಗಳ ಮಾರಾಟದ ಗಡಿ ದಾಟಿತ್ತು.
 
ಮಾರುತಿ ಸುಜುಕಿ ಸಂಸ್ಥೆಯ ಸ್ವದೇಶಿ ಮಾರಾಟದಲ್ಲಿ 16.2 ಪ್ರತಿಶತ ಹೆಚ್ಚಳವಾಗಿ 1,17,045 ವಾಹನಗಳನ್ನು ಮಾರಾಟ ಮಾಡಿದೆ. 2015 ರ ಸಾಲಿನ ಏಪ್ರಿಲ್ ತಿಂಗಳಲ್ಲಿ 1,00,709 ವಾಹನಗಳು ಮಾರಾಟವಾಗಿದ್ದವು.
 
ಮಿನಿ ವಿಭಾಗದ ಕಾರುಗಳಾದ ಆಲ್ಟೋ ಮತ್ತು ವ್ಯಾಗನ್‌ಆರ್, ಕಳೆದ ಆರ್ಥಿಕ ವರ್ಷದ ಇದೆ ಅವಧಿಯಲ್ಲಿ 35,906 ಕಾರುಗಳು ಮಾರಾಟವಾಗಿದ್ದು, ಪ್ರಸಕ್ತ ವರ್ಷದಲ್ಲಿ 9.9 ಪ್ರತಿಶತ ಕುಸಿತ ಕಂಡು 31,906 ಕಾರುಗಳ ಮಾರಾಟವಾಗಿದೆ ಎಂದು ಮಾರುತಿ ಸುಜುಕಿ ತನ್ನ ವರದಿಯಲ್ಲಿ ತಿಳಿಸಿದೆ.
 
ಕಾಂಪ್ಯಾಕ್ಟ್ ವಿಭಾಗದ ಸ್ವಿಫ್ಟ್, ಎಸ್ಟಿಲೊ, ರಿಟ್ಜ್, ಡಿಜೈರ್ ಮತ್ತು ಬಲೆನೋ ಆವೃತ್ತಿಯ ಕಾರುಗಳು ಕಳೆದ ಆರ್ಥಿಕ ವರ್ಷದ ಇದೆ ಅವಧಿಯಲ್ಲಿ 42,297 ಕಾರುಗಳನ್ನು ಮಾರಾಟವಾಗಿದ್ದು, ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಲ್ಲಿ 8 ಪ್ರತಿಶತ ಹೆಚ್ಚಳವಾಗಿ 45,700 ಕಾರುಗಳ ಮಾರಾಟದ ಗಡಿ ದಾಟಿದೆ. 
 
ವ್ಯಾನ್ಸ್, ಒಮ್ನಿ ಮತ್ತು ಇಕೋ ಆವೃತ್ತಿಯ ವಾಹನಗಳು ಕಳೆದ ಆರ್ಥಿಕ ವರ್ಷದ ಏಪ್ರಿಲ್ ತಿಂಗಳಲ್ಲಿ 12,069 ಕಾರುಗಳು ಮಾರಾಟವಾಗಿದ್ದು, ಪ್ರಸಕ್ತ ವರ್ಷದಲ್ಲಿ 20.3 ಪ್ರತಿಶತ ಏರಿಕೆ ಕಂಡು 14,520 ಕಾರುಗಳು ಮಾರಾಟವಾಗಿವೆ.

ವೆಬ್ದುನಿಯಾವನ್ನು ಓದಿ