ಸ್ಕೈಪ್ ವೈಫೈನ್ನು ನಿಲ್ಲಿಸುತ್ತಿದೆ ಮೈಕ್ರೋಸಾಫ್ಟ್!

ಶನಿವಾರ, 4 ಮಾರ್ಚ್ 2017 (11:40 IST)
ಸ್ಕೈಪ್ ವೈಫೈ ಆಪನ್ನು ಮೈಕ್ರೋಸಾಫ್ಟ್ ನಿಲ್ಲಿಸುತ್ತಿರುವುದಾಗಿ ಸುದ್ದಿ ಇದೆ. ಭಾರತೀಯರಿಗಾಗಿ ವಿಶೇಷ ಸ್ಕೈಪ್ ಲೈಟ್ ಆಪನ್ನು ಸಿದ್ಧಪಡಿಸುತ್ತಿರುವುವಾಗಿ ತಿಳಿಸಿದ ಕೆಲವೇ ದಿನಗಳಿಗೆ ಕಂಪೆನಿ ಈ ನಿರ್ಧಾರಕ್ಕೆ ಬಂದಿರುವುದು ಗಮನಾರ್ಹ.
 
ಜಗತ್ತಿನಾದ್ಯಂತ ಇರುವ ಎರಡು ಕೋಟಿ ಹಾಟ್‌ಸ್ಪಾಟ್‌ಗಳಲ್ಲಿ ಯಾವುದಾದರೂ ಒಂದಕ್ಕೆ ಸಂಪರ್ಕ ಸಾಧಿಸುವುದು ಸ್ಕೈಪ್ ವೈಫೈ ವಿಶೇಷತೆ. ಮಾರ್ಚ್ 31ರಿಂದ ಇದರ ಸೇವೆಗಳನ್ನು ನಿಲ್ಲಿಸಲಾಗುತ್ತಿದೆ. 
 
ಆಪ್ ಬಳಕೆದಾರರ ಬಳಿ ಉಳಿದಿರುವ ಸ್ಕೈಪ್ ಕ್ರೆಡಿಟನ್ನು ಕರೆಗಳು, ಸಂದೇಶಗಳು ಕಳುಹಿಸಲು ಬಳಸಿಕೊಳ್ಳಬಹುದು. ಅಥವಾ ಸ್ಕೈಪ್ ಬಳಕೆದಾರರು ಸೇವಾ ವಿಭಾಗವನ್ನು ಸಂಪರ್ಕಿಸಿದರೆ ಹಣ ವಾಪಸ್ ಮಾಡಲಾಗುತ್ತದೆ ಎಂದು ಕೆಂಪೆನಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ