ದಿನದಿಂದ ದಿನಕ್ಕೆ ಮಾಲ್‌ವೇರ್‌ಗಳ ದಾಳಿ ಹೆಚ್ಚುತ್ತಿದೆ. ಅವನ್ನು ಎದುರಿಸಬೇಕಾದರೆ ಗ್ರಾಹಕರಿಗೆ ಯಾವಾಗಲೂ ಓಎಸ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತಾ ಅಪ್‌ಡೇಟ್ ಕಳುಹಿಸಬೇಕಾಗಿರುತ್ತದೆ. ಅದೇ ರೀತಿ ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಪ್ರಿಂಟರ್..ಕೀಬೋರ್ಡ್..ಸ್ಪೀಕರ್..ಮೌಸ್ ಇನ್ನಿತರೆ ಹಾರ್ಡ್‌ವೇರ್ ಪರಿಕರಗಳನ್ನು ಬೆಂಬಲಿಸಬೇಕಾದರೂ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.
ಮುಖ್ಯವಾಗಿ ಹಾರ್ಡ್‍ವೇರ್ ತಯಾರಕರು ವಿಂಡೋಸ್ 7ಕ್ಕೆ ಸರಿಹೊಂದುವ ಡ್ರೈವರ್ ಸಾಫ್ಟ್‌ವೇರ್‌ಗಳನ್ನು ಕೊಡುತ್ತಿಲ್ಲ. ಹೊಸದಾಗಿ ಬಂದಿರುವ ವಿಂಡೋಸ್ 10ಕ್ಕೆ ಕೊಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವುದು ಮೈಕ್ರೋಸಾಫ್ಟ್ ಕಂಪೆನಿಗೆ ದೊಡ್ಡ ತಲೆನೋವಾಗಿದೆ. ಹಾಗಾಗಿ ವಿಂಡೋಸ್ 7ಕ್ಕೆ 2020 ಜನವರಿ 13ರಿಂದ ಸೆಕ್ಯುರಿಟಿ ಸಪೋರ್ಟ್ ಸಂಪೂರ್ಣವಾಗಿ ನಿಲ್ಲಿಸುತ್ತಿರುವುದಾಗಿ ಕಂಪೆನಿ ಹೇಳಿದೆ. ಅಷ್ಟರೊಳಗೆ ಬಳಕೆದಾರರು ವಿಂಡೋಸ್ 10ಕ್ಕೆ ಬದಲಾಗಬೇಕೆಂದು ಮೈಕ್ರೋಸಾಫ್ಟ್ ಹೇಳಿದೆ.