’ಮನಿಟಾಪ್’ ಆಪ್‌ನೊಂದಿಗೆ ಸಾಲ ಸೌಲಭ್ಯ!

ಶುಕ್ರವಾರ, 16 ಡಿಸೆಂಬರ್ 2016 (10:55 IST)
ಮೊಬೈಲ್‌ನಲ್ಲೇ ಈಗ ಎಲ್ಲವೂ ಸಿಗುವಂತಾಗಿದೆ. ಡಿಜಿಟಲ್ ಇಂಡಿಯಾ ಭಾಗವಾಗಿ ಬಹಳಷ್ಟು ಮೊಬೈಲ್ ಆಪ್‍ಗಳು ಬರುತ್ತಿವೆ. ಇದೀಗ ಸಾಲ ಸೌಲಭ್ಯಕ್ಕೊಂದು ಆಪ್ ಬಿಡುಗಡೆಯಾಗಿದೆ. ಆಪ್ ಆಧಾರಿತ ಕ್ರೆಡಿಟ್ ಲೈನ್ ಮನಿಟಾಪ್ ಬ್ಯಾಂಕುಗಳ ಸಹಕಾರದೊಂದಿಗೆ ಸಾಲ ಕೊಡುವುದಾಗಿ ಪ್ರಕಟಿಸಿದೆ.
 
ತಮ್ಮೊಂದಿಗೆ ಕೈಜೋಡಿಸಿರುವ ಬ್ಯಾಂಕ್‍ಗಳ ಮೂಲಕ ಮನಿಟಾಪ್ ಆಪ್ ಬಳಸಿ ಕೂಡಲೆ ಸಾಲ ಪಡೆಯಬಹುದು ಎಂದು ಸಹ ವ್ಯವಸ್ಥಾಪಕ ಅನೂಜ್ ಕಾಕ್ಕರ್ ತಿಳಿಸಿದ್ದಾರೆ. ಗುರುವಾರ ಹೈದರಾಬಾದ್‌ನಲ್ಲಿ ಈ ಆಪ್ ಬಿಡುಗಡೆಯಾಯಿತು. ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ವರ್ಷಕ್ಕೆ ಶೇ.15-18ರಷ್ಟು ಬಡ್ಡಿ ದರದಲ್ಲಿ ಯಾವುದೇ ಸಮಯದಲ್ಲಾಗಲಿ ಸಾಲ ಕೊಡಲಿದ್ದೇವೆ ಎಂದಿದ್ದಾರೆ.
 
ಪ್ರೊಸೆಸಿಂಗ್ ಭಾಗವಾಗಿ ಶೇ.2 ರಷ್ಟು ಶುಲ್ಕ ವಿಧಿಸುತ್ತೇವೆ. ಖಾತಾದಾರರ ಆರ್ಥಿಕ ಸ್ಥಿತಿಗನುಗುಣವಾಗಿ ರೂ. 5 ಲಕ್ಷದವರೆಗೂ ಸಾಲ ಪಡೆಯಬಹುದು. ಈ ಸಾಲವನ್ನು ಬ್ಯಾಂಕಿನ ಮೂಲಕ ಮಾತ್ರ ಕೊಡಿಸುತ್ತೇವೆ. ನೇರವಾಗಿ ಸಾಲ ಕೊಡುವುದು ತೆಗೆದುಕೊಳ್ಳುವುದು ಆಗಲ್ಲ. ಈಗಾಗಲೆ 70 ಸಾವಿರ ಮಂದಿ ಆಪ್‌ನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆದರೆ ಸಾಲ ಪಡೆದವರ ಸಂಖ್ಯೆ ಕಡಿಮೆ ಇದೆ. ಮುಂದಿನ ಮೂರು ವರ್ಷಗಳಲ್ಲಿ 10 ಲಕ್ಷ ಮಂದಿ ಖಾತಾದಾರರನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದಿದೆ ಕಂಪನಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ