ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಸಂಸ್ಥೆಯಾಗಿರುವ ಮೋಟೋರೋಲಾ, ನಾಲ್ಕನೇಯ ಪೀಳಿಗೆಯ ಮೋಟೊ ಜಿ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮೇ 17 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಸಂಸ್ಥೆ, ಈಗಾಗಲೇ ಕಾರ್ಯಕ್ರಮವೊಂದಕ್ಕೆ ಮಾಧ್ಯಮಗಳನ್ನು ಆಮಂತ್ರಿಸುತ್ತಿದ್ದು, ಈ ಸಂದರ್ಭದಲ್ಲಿ 4 ನೇ ಪೀಳಿಗೆಯ ಮೋಟೋ ಜಿ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿದೆ ಎಂದು ಮೂಲಗಳು ತಿಳಿಸಿವೆ
ಮೊಟೊರೊಲಾ ಸಂಸ್ಥೆ, ನಾಲ್ಕನೇಯ ಪೀಳಿಗೆಯ ಮೋಟೊ ಜಿ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಸ್ಟ್ಯಾಂಡರ್ಡ್ ಆವೃತ್ತಿ ಮತ್ತು ಪ್ಲಸ್ ಆವೃತ್ತಿ ಎಂದು ಎರಡು ವಿಧಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.