ರಿಲಯನ್ಸ್ ಜಿಯೋ ಫೋನ್ ಇಂದು ಘೋಷಣೆ ಮಾಡ್ತಾರಾ ಮುಕೇಶ್ ಅಂಬಾನಿ?

ಶುಕ್ರವಾರ, 21 ಜುಲೈ 2017 (10:58 IST)
ಮುಂಬೈ: ಬಹುದಿನಗಳಿಂದ ಗ್ರಾಹಕರು ಕಾಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ 4 ಜಿ ಅಗ್ಗದ ಮೊಬೈಲ್ ಫೋನ್ ಬಿಡುಗಡೆ ಮಾಡುವ ಬಗ್ಗೆ ಮುಕೇಶ್ ಅಂಬಾನಿ ಇಂದು ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.


ಇಂದು 11 ಗಂಟೆಯಿಂದ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಮಹಾಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮುಖ್ಯಸ್ಥ ಮುಕೇಶ್ ಅಂಬಾನಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಗ್ಗದ ಫೋನ್ ಬಗ್ಗೆ ಘೋಷಣೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಈಗಾಗಲೇ ಇಂಟೆಕ್ಸ್ ಸಂಸ್ಥೆ ಜತೆ ಕೈ ಜೋಡಿಸಿರುವ ರಿಲಯನ್ಸ್ 4 ಜಿ ವೋಲ್ಟ್ ಫೋನ್ ಗಳ ತಯಾರಿಕೆಯಲ್ಲಿ ತೊಡಗಿದೆ ಎಂಬ ಸುದ್ದಿ ಬಂದಿದೆ. ಇದೀಗ ತಾವು ಘೋಷಿಸುವ ಹೊಸ ಫೋನ್ ನ ಬೆಲೆ, ಯಾವಾಗ ಮಾರುಕಟ್ಟೆಗೆ ಬರುತ್ತದೆಂಬ ಬಗ್ಗೆ ಅಂಬಾನಿ ವಿವರಣೆ ನೀಡಬಹುದೆಂದು ನಿರೀಕ್ಷಿಸಲಾಗಿದೆ.

ಈಗಾಗಲೇ ರಿಲಯನ್ಸ್ ಜಿಯೋ ಸಿಮ್ ಗಳ ಮೂಲಕ ಕಡಿಮೆ ದರದಲ್ಲಿ 4 ಜಿ ಸ್ಪೀಡ್ ನ ಇಂಟರ್ನೆಟ್ ಒದಗಿಸಿ ಗ್ರಾಹಕರನ್ನು ತನ್ನತ್ತ ಸೆಳೆದಿರುವ ರಿಲಯನ್ಸ್ ಸಂಸ್ಥೆ, ಹೊಸ ಫೋನ್ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಟೆಲಿಕಾಂ ಮತ್ತು ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಹೊಸ ಕ್ರಾಂತಿ ಹುಟ್ಟು ಹಾಕಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಇದನ್ನೂ ಓದಿ..  ಆಪ್ ಮೂಲಕವೇ ಬಂಜೆತನಕ್ಕೆ ಚಿಕಿತ್ಸೆ ಪಡೆದವಳು ಇದೀಗ ಗರ್ಭಿಣಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ