ರೂ.1000 ನೋಟು ಚಲಾವಣೆಗೆ ಬಿಡುಗಡೆ ಮಾಡುತ್ತಿಲ್ಲ

ಬುಧವಾರ, 22 ಫೆಬ್ರವರಿ 2017 (17:14 IST)
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸದಾಗಿ ರೂ.1000 ನೋಟು ಬಿಡುಗಡೆ ಮಾಡಲಿದೆ ಎಂಬ ಸುದ್ದಿಯನ್ನು ಆರ್ಥಿಕ ವ್ಯಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅಲ್ಲಗಳದಿದ್ದಾರೆ. ಹೊಸದಾಗಿ ರೂ.1000 ನೋಟು ಮುದ್ರಿಸುವ ಯೋಜನೆ ಸದ್ಯಕ್ಕೆ ಸರಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
 
ತನ್ನ ಟ್ವಿಟ್ಟರ್ ಖಾತೆಯಲ್ಲಿ ಅವರು, ಸರಕಾರ ಸಸ್ಯಕ್ಕೆ ರೂ.500 ಮತ್ತು ಇತರೆ ಕಡಿಮೆ ಮೌಲ್ಯದ ನೋಟುಗಳನ್ನು ಮುದ್ರಿಸುವುದರ ಕಡೆಗೆ ಗಮನಹರಿಸಿದೆ. ಕೆಲವು ಎಟಿಎಂ‌ಗಳಲ್ಲಿ ನಗದು ಕೊರತೆ ಇದ್ದು, ಜನ ಅಗತ್ಯವಿರುವಷ್ಟು ಹಣವನ್ನು ಮಾತ್ರ ವಿತ್ ಡ್ರಾ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ