ಈಗ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ವೈದ್ಯರನ್ನು ಸಂಪರ್ಕಿಸಿ

ಸೋಮವಾರ, 2 ಮೇ 2016 (16:55 IST)
ನೀವೀಗ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಹ ವೈದ್ಯರನ್ನು ಸಂಪರ್ಕಿಸಬಹುದು. ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಕಳೆದ ತಿಂಗಳು "ಚಾಟ್‌ಬೋಟ್" ವ್ಯಶಿಷ್ಟ್ಯವನ್ನು ಡೆವಲಪರ್ಸ್‌ಗೆ ಪರಿಚಯಿಸಿತ್ತು. ಆನ್‌ಲೈನ್ ಡಾಕ್ಟರ್ ಕನ್ಸಲ್ಟೇಶನ್ ಪ್ಲಾಟ್‌ಫಾರ್ಮ್ ಲೈಬ್ರೇಟ್ ತನ್ನ ಲೈಬ್ರೇಟ್ ಬೋಟ್ ವೈಶಿಷ್ಟ್ಯವನ್ನು ಘೋಷಿಸ ಹೊರಟಿದೆ.
ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಲೈಬ್ರೇಟ್ ಬೋಟ್ ಕಾಣಿಸಿಕೊಳ್ಳಲಿದ್ದು, ಇದು ಬಳಕೆದಾರರ ಆರೋಗ್ಯ ಸಂಬಂಧಿತ ಸಮಸ್ಯೆಗಳ ಕುರಿತು ಪ್ರಶ್ನೆ ಮತ್ತು ಅಭಿಪ್ರಾಯಗಳನ್ನು ವೈದ್ಯರುಗಳೊಂದಿಗೆ ಹಂಚಿಕೊಳ್ಳಲು ಕೊಂಡಿಯಾಗಿ ಕೆಲಸ ನಿರ್ವಹಿಸಲಿದೆ. ಬಳಕೆದಾರರು ಪ್ರಶ್ನೆಗಳ ಆಧಾರದ ಮೇಲೆ ಪ್ರತಿಕ್ರಿಯೆ ದೊರೆಯಲಿದೆ. ಬಳಕೆದಾರರು ಈ ಸೇವೆಯನ್ನು ಪಡೆಯಲು ತಮ್ಮ ಮೆಸೆಂಜರ್ ಅಪ್ಲಿಕೇಶನ್‌ ಮೂಲಕ ಉಚಿತವಾಗಿ ಬೋಟ್‌ನ್ನು ಸೇರಿಸಿಕೊಂಡು, ಈ ಲಿಂಕ್ ಮೇಲೆ http://m.me/lybrate ಕ್ಲಿಕ್ ಮಾಡಿ.
 
ಸ್ಮಾರ್ಟ್‌ಪೋನ್ ಅಪ್ಲಿಕೇಶನ್‌ಗಳಲ್ಲಿ ಲೈಬ್ರೇಟ್ ವೈಶಿಷ್ಟ್ಯ ಲಭ್ಯವಿದ್ದು, ಈ ಪ್ಲಾಟ್‌ಫಾರ್ಮ್‌ನಲ್ಲಿ 50 ವಿವಿಧ ವಿಭಾಗದ 1 ಲಕ್ಷ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಲೈಬ್ರೇಟ್ ಹೇಳಿಕೊಂಡಿದೆ.

ವೆಬ್ದುನಿಯಾವನ್ನು ಓದಿ