ರಾಷ್ಟ್ರೀಯತೆ ವಿವಾದ: ಓಲಾ- ಉಬೇರ್ ಪೈಪೋಟಿ

ಶುಕ್ರವಾರ, 1 ಜುಲೈ 2016 (19:40 IST)
ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಆಪ್ ಆಧಾರಿತ ಪ್ರಯಾಣ ಸೇವೆ ನೀಡುತ್ತಿರುವ ಓಲಾ ಮತ್ತು ಅದರ ಪ್ರತಿಸ್ಫರ್ಧಿ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಉಬೇರ್ ಪೈಪೋಟಿ ನಡೆಸುತ್ತಿವೆ.
 
ವಹಿವಾಟಿನನ ರಣತಂತ್ರವಾಗಿ ಸರಣಿ ಕಾನೂನುಗಳನ್ನು ಉಲ್ಲಂಘಿಸಿ ಬಹುರಾಷ್ಟ್ರೀಯ ಕಂಪೆನಿ ಗುರುತು ಮುಚ್ಚಿಸಿಕೊಳ್ಳುವಂತಹ ಕಂಪೆನಿಗಳೊಂದಿಗೆ ನಮ್ಮ ಪೈಪೋಟಿಯಿರುವುದು ನಾಚಿಕೆಗೇಡಿತನದ ಸಂಗತಿ, ಇದು ಕೇವಲ ಭಾರತದಲ್ಲಿ ಅಲ್ಲ. ಜಾಗತಿಕ ಮಟ್ಟದಲ್ಲೂ ಇಂತಹ ಪರಿಸ್ಥಿತಿಯಿದೆ. ನಮ್ಮ ಚರ್ಚೆ ವಿದೇಶಿ ಕಂಪೆನಿ ಅಥವಾ ಸ್ಥಳೀಯ ಕಂಪೆನಿ ಎನ್ನುವುದಲ್ಲ. ಸ್ಥಳೀಯ ಕಾನೂನಿಗೆ ಯಾರು ಗೌರವ ಕೊಡುತ್ತಾರೋ ಅಥವಾ ಇಲ್ಲವೋ ಎನ್ನುವುದಾಗಿದೆ ಎಂದು ಓಲಾ ಕಂಪೆನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಣಯ್ ಜಿವ್‌ರಾಜ್ಕಾ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.   
 
ಆಪ್ ಆಧಾರಿತ ಪ್ರಯಾಣ ಸೇವೆ ನೀಡುತ್ತಿರುವ ಓಲಾ, ಕಳೆದ ವಾರ ಕರ್ನಾಟಕದಲ್ಲಿ ಕ್ಯಾಬ್ ಸೇವೆ ನೀಡಲು ಪರವಾನಗಿ ಪಡೆದುಕೊಂಡಿತ್ತು. ಉಬೇರ್ ಸಂಸ್ಥೆ ಸಲ್ಲಿಸಿದ ಅಪ್ಲಿಕೇಶನ್ ಹಿಂದೆ ಬಿದ್ದಿದ್ದು, ಹೊಸ ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ಕೋರಿದ್ದಾಗಿ ಉಬೇರ್ ಅಸಮಾಧಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ