ಚೀನಾದ ಒನ್‌ಪ್ಲಸ್‌ನಿಂದ ’ಒನ್‌ಪ್ಲಸ್ 3ಟಿ’ ಸ್ಮಾರ್ಟ್‌ಫೋನ್

ಶನಿವಾರ, 3 ಡಿಸೆಂಬರ್ 2016 (11:07 IST)
ಚೀನಾ ಸ್ಮಾರ್ಟ್‌ಫೋನ್ ಕಂಪನಿ ಒನ್‌ಪ್ಲಸ್ ತನ್ನ ಫ್ಲಾಗ್‌ಶಿಪ್ ಮೊಬೈಲ್ ಒನ್‍ಪ್ಲಸ್ 3ರ ಹೊಸ ಆವೃತ್ತಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಒನ್‌ಪ್ಲಸ್ 3ಟಿ ಹೆಸರಿನ ಇದು 64 ಜಿಬಿ (ಬೆಲೆ ರೂ.29,990), 128 ಜಿಬಿ (ಬೆಲೆ ರೂ.34,999) ಎರಡು ಭಿನ್ನ ಆವೃತ್ತಿಗಳಲ್ಲಿ ಲಭ್ಯ.
 
ಈ ಫೋನ್‌ಗಳನ್ನು 6 ಜಿಬಿ ರ್ಯಾಮ್‌ನ ಅತ್ಯಂತ ಶಕ್ತಿಯುತವಾದ ಕ್ಯಾಲ್‌ಕಾಮ್ ಸ್ನಾಪ್‌ಡ್ರ್ಯಾಗನ್ 821 ಪ್ರಾಸೆಸರ್ (2.35 ಗಿಗಾ ಹಟ್ಜ್)ನಿಂದ ತಯಾರಿಸಲಾಗಿದೆ ಎಂದು ಒನ್‌ಪ್ಲಸ್ ಸಿಈಓ ಪಿಟೆ ಲಿಯೋ ತಿಳಿಸಿದ್ದಾರೆ. ಈ ತಿಂಗಳ ಡಿಸೆಂಬರ್ 14ರಿಂದ ಅಮೆಜಾನ್ ಮೂಲಕ ಇವನ್ನು ಖರೀದಿಸಬಹುದು ಎಂದು ಹೇಳಿದರು.
 
ಶೀಘ್ರದಲ್ಲೇ ಕೆಲವೊಂದು ಆಫರ್‌ಗಳನ್ನು ಪ್ರಕಟಿಸುತ್ತಿದ್ದೇವೆಂದೂ ಒನ್‌ಪ್ಲಸ್ ಜನರಲ್ ಮ್ಯಾನೇಜರ್ (ಭಾರತ) ವಿಕಾಸ್ ಅಗರ್ವಾಲ್ ಹೇಳೀದರು. ಆಂಡ್ರಾಯ್ಡ್ 6.0.1 ಆಧಾರಿತ ಆಕ್ಸಿಜನ್ ಓಎಸ್ ಕಸ್ಟಮ್ ಸಿಸ್ಟಂ ಮೇಲೆ ಕೆಲಸ ಮಾಡುವ ಈ ಫೋನ್ 5.5 ಇಂಚು ಇದೆ. ಆಪ್ಟಿಕ್ ಅಮೋಲೆಡ್ ಡಿಸ್ಪ್ಲೆ, 3,400 ಎಂಎಎಚ್ ಬ್ಯಾಟರಿ, ಅರ್ಧಗಂಟೆಯಲ್ಲೇ ಚಾರ್ಚ್ ಆಗುವ ಡ್ಯಾಶ್ ಚಾರ್ಚ್ ಟೆಕ್ನಾಲಜಿ, ಹಿಂಬದಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ