ರೆಜಿಮೆಂಟ್‍ನ ಸೈನಿಕರು ಹಲವಾರು ವಾದ್ಯಗಳ ಮೂಲಕ ಹರಿಸಿದ ಸಂಗೀತದ ಹೊನಲಿಗೆ ಪ್ರೇಕ್ಷಕರು ತಲೆದೂಗಿದರು. ಕಾರ್ನೆಟ್, ಸ್ನೇರ್ ಡ್ರಮ್ಸ್, ಬಾಸ್ ಡ್ರಮ್ಸ್, ಸಿಂಬಲ್ಸ್, ಹಾನ್ರ್ಸ್, ಸ್ಯಾಕ್ಸೋಫೋನ್, ಬಾಸೂನ್ಸ್, ಕ್ಲಾರಿನೆಟ್ಸ್ ಸೇರಿದಂತೆ ಹಲವಾರು ವಾದ್ಯಗಳನ್ನು ನುಡಿಸುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಬ್ರಿಗೇಡ್ ಗ್ರೂಪ್ ನ ಬ್ರಿಗೇಡ್ ಗೇಟ್ ವೇ ಎನ್ ಕ್ಲೇವ್ ಭಾಗವಾಗಿರುವ ಒರಾಯನ್ ಮಾಲ್, ಹಬ್ಬಹರಿದಿನಗಳು, ವಿಶೇಷ ಸಂದರ್ಭ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.